Home Uncategorized ಮೂರನೇ ಬಾರಿ ಈಡಿ ವಿಚಾರಣೆಗೆ ಗೈರಾದ ಅರವಿಂದ್ ಕೇಜ್ರಿವಾಲ್; ಸಮನ್ಸ್ ಕಾನೂನುಬಾಹಿರ ಎಂದ ಆಪ್

ಮೂರನೇ ಬಾರಿ ಈಡಿ ವಿಚಾರಣೆಗೆ ಗೈರಾದ ಅರವಿಂದ್ ಕೇಜ್ರಿವಾಲ್; ಸಮನ್ಸ್ ಕಾನೂನುಬಾಹಿರ ಎಂದ ಆಪ್

25
0

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದ ವಿಚಾರಣೆಗೆ ಇಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಜರಾಗುವುದಿಲ್ಲ ಎಂದು ಆಪ್ ಪಕ್ಷ ತಿಳಿಸಿದೆ. ಜಾರಿ ನಿರ್ದೇಶನಾಲಯ(ಈಡಿ)ದ ಸಮನ್ಸ್ ಕಾನೂನುಬಾಹಿರವಾಗಿದ್ದು, ಅದರ ಗುರಿ ಅರವಿಂದ್ ಕೇಜ್ರಿವಾಲ್ ರನ್ನು ಬಂಧಿಸುವುದಾಗಿದೆ ಎಂದು ಅದು ಆರೋಪಿಸಿದೆ ಎಂದು ndtv.com ವರದಿ ಮಾಡಿದೆ.

ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆದ ಅರವಿಂದ್ ಕೇಜ್ರಿವಾಲ್ ಇಡಿ ಸಮನ್ಸ್ ಅನ್ನು ತಪ್ಪಿಸಿಕೊಳ್ಳುತ್ತಿರುವುದು ಇದು ಮೂರನೆಯ ಬಾರಿ ಆಗಿದ್ದು, ಇದಕ್ಕೂ ಮುನ್ನ ನವೆಂಬರ್ 2 ಹಾಗೂ ಡಿಸೆಂಬರ್ 21ರಂದು ಜಾರಿಗೊಳಿಸಲಾಗಿದ್ದ ಮೊದಲೆರಡು ಸಮನ್ಸ್ ಗಳಿಗೂ ಅವರು ಜಾರಿ ನಿರ್ದೇಶನಾಲಯದೆದುರು ಗೈರಾಗಿದ್ದರು.

ಅರವಿಂದ್ ಕೇಜ್ರಿವಾಲ್ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಲು ಸಿದ್ಧರಿದ್ದಾರಾದರೂ, ಅವರಿಗೆ ರವಾನಿಸಿರುವ ಸಮನ್ಸ್ ಕಾನೂನು ಬಾಹಿರವಾಗಿದ್ದು, ಅವರನ್ನು ಬಂಧಿಸುವ ಉದ್ದೇಶದಿಂದ ರವಾನಿಸಲಾಗಿದೆ ಎಂದು ಆಪ್ ಆರೋಪಿಸಿದೆ.

“ಚುನಾವಣೆಗೂ ಮುನ್ನವೇ ಏಕೆ ನೋಟಿಸ್ ಅನ್ನು ಕಳಿಸಲಾಗಿದೆ? ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರ ಮಾಡದಂತೆ ತಡೆಯುವ ಉದ್ದೇಶವನ್ನು ಈ ನೋಟಿಸ್ ಹೊಂದಿದೆ” ಎಂದು ಆಪ್ ಪಕ್ಷವು ದೂರಿದೆ.

ಎಪ್ರಿಲ್ ತಿಂಗಳಲ್ಲಿ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಪ್ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ ರನ್ನು ಸಿಬಿಐ ಪ್ರಶ್ನಿಸಿತ್ತಾದರೂ, ಆ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಿರಲಿಲ್ಲ.

LEAVE A REPLY

Please enter your comment!
Please enter your name here