Home ಕರ್ನಾಟಕ ಮೂವರು ಸಹೋದರಿಯರ ಸಹಿತ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮೂವರು ಸಹೋದರಿಯರ ಸಹಿತ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

4
0

ಸೂರತ್‌: ಫ್ಲ್ಯಾಟ್​ ಒಂದರಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೂರತ್‌ನ ಜಹಾಂಗೀರ್‌ಪುರದಲ್ಲಿ ನಡೆದಿದೆ. ಗೀಸರ್​ನ ಗ್ಯಾಸ್​ ಸೋರಿಕೆಯಾಗಿ ಮೃತಪಟ್ಟಿರಬಹುದು ಶಂಕಿಸಲಾಗಿದೆ.

ಫ್ಲ್ಯಾಟ್ ಮಾಲಕರಾದ ಜಸುಬೆನ್ ವಧೇಲ್, ಅವರ ಸಹೋದರಿಯರಾದ ಶಾಂತಬೆನ್ ವಧೇಲ್ (53) ಮತ್ತು ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಮೃತಪಟ್ಟವರು.

ಇವರು ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮಲಗುವ ಮುನ್ನ ಒಟ್ಟಿಗೆ ಊಟ ಮಾಡಿದ್ದರಿಂದ ಆಹಾರ ವಿಷಪೂರಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಮನೆಯ 9 ಸದಸ್ಯರು ಒಟ್ಟಿಗೆ ಊಟ ಮಾಡಿದ್ದು, ಉಳಿದವರು ಸುರಕ್ಷಿತವಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here