Home Uncategorized ಮೆಟ್ರೋ ನೇರಳೆ ಮಾರ್ಗ ಸಂಪೂರ್ಣ: ಚಲ್ಲಘಟ್ಟ – ವೈಟ್‌ಫೀಲ್ಡ್‌ ನಡುವೆ ನಾಳೆಯಿಂದ ರೈಲು ಸಂಚಾರ ಆರಂಭ!

ಮೆಟ್ರೋ ನೇರಳೆ ಮಾರ್ಗ ಸಂಪೂರ್ಣ: ಚಲ್ಲಘಟ್ಟ – ವೈಟ್‌ಫೀಲ್ಡ್‌ ನಡುವೆ ನಾಳೆಯಿಂದ ರೈಲು ಸಂಚಾರ ಆರಂಭ!

27
0

ನಮ್ಮ ಮೆಟ್ರೊ ನೇರಳೆ ಮಾರ್ಗ ನಾಳೆಯಿಂದ  ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಬೈಯಪ್ಪನಹಳ್ಳಿ- ಕೆಆರ್ ಪುರ ಮತ್ತು ಕೆಂಗೇರಿ- ಚಲ್ಲಘಟ್ಟ ನಡುವಿನ ವಿಸ್ತರಿತಾ ಮಾರ್ಗದ ಉದ್ಘಾಟನೆ ವಿಳಂಬದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗ ನಾಳೆಯಿಂದ  ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ. ಬೈಯಪ್ಪನಹಳ್ಳಿ- ಕೆಆರ್ ಪುರ ಮತ್ತು ಕೆಂಗೇರಿ- ಚಲ್ಲಘಟ್ಟ ನಡುವಿನ ವಿಸ್ತರಿತಾ ಮಾರ್ಗದ ಉದ್ಘಾಟನೆ ವಿಳಂಬದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ನಂತರ ಈ ಎರಡು ಮಾರ್ಗಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇತ್ತೀಚೆಗೆ ಕರ್ನಾಟಕ ನಗರಾಭಿವೃದ್ಧಿ ಇಲಾಖೆಗೆ ಸೂಚನೆ ನೀಡಿತ್ತು. 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ರವಿ ಚೌಧರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ವಿಭಾಗಗಳನ್ನು ಔಪಚಾರಿಕವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಬೆಂಗಳೂರಿನ ಪ್ರಯಾಣಿಕರ ದೃಷ್ಟಿಕೋನದಿಂದ ಈ ಎರಡು ವಿಭಾಗಗಳು ಪ್ರಮುಖವಾಗಿವೆ, ಏಕೆಂದರೆ ಎರಡೂ ನಗರದ ಪೂರ್ವದಿಂದ ಪಶ್ಚಿಮ ಭಾಗಕ್ಕೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ ಎಂದು ತಿಳಿಸಿದ್ದಾರೆ. Operations tomorrow: The full Purple Line extn stretch btwn Kadugodi (Whitefield) and Challaghatta line will be opened for public from Monday, confirmed BMRCL sources on Sunday. @NewIndianXpress @XpressBengaluru @KannadaPrabha @KARailway @srivasrbmrccoi1 @jith746 pic.twitter.com/rIdUtxRFQg— S. Lalitha (@Lolita_TNIE) October 8, 2023

ಈ ನಿಟ್ಟಿನಲ್ಲಿ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಅಧಿಕೃತ ಕಾರ್ಯಕ್ರಮವಿಲ್ಲದೆ ಈ ಎರಡು ವಿಭಾಗಗಳನ್ನು ಅಕ್ಟೋಬರ್ 9, 2023 ರ ಬೆಳಿಗ್ಗೆ ತಕ್ಷಣವೇ ಪ್ರಯಾಣಿಕರ ಸೇವೆಗಾಗಿ ಮುಕ್ತಗೊಳಿಸಬೇಕು. ಇದರಿಂದ ದೈನದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.  ಈ ಬೆಳವಣಿಗೆಯ ನಂತರ 2.2 ಕಿಮೀ ಉದ್ದದ ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು 2.1 ಕಿಮೀ ಉದ್ದದ ಕೆಂಗೇರಿ-ಚಲ್ಲಘಟ್ಟ ವಿಭಾಗಗಳು ಸೋಮವಾರ ಕಾರ್ಯನಿರ್ವಹಿಸಲಿವೆ ಎಂದು ಬಿಎಂಆರ್ ಸಿಎಲ್  ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (CMRS) ಸೆಪ್ಟೆಂಬರ್ 25 ರಂದು ಬೈಯಪ್ಪನಹಳ್ಳಿ-ಕೆಆರ್ ಪುರಂ ಮತ್ತು ಸೆಪ್ಟೆಂಬರ್ 30 ರಂದು ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಅನುಮತಿ ನೀಡಿದ್ದರು. ಬಿಎಂಆರ್ ಸಿಎಲ್  ಆರಂಭದಲ್ಲಿ ಎರಡೂ ಮಾರ್ಗಗಳನ್ನು  ಅಕ್ಟೋಬರ್ 2 ರಂದು, ತದನಂತರ 6 ರಂದು ಉದ್ಘಾಟಿಸುವ ಉದ್ದೇಶ ಹೊಂದಿತ್ತು.  ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯುವಲ್ಲಿ ವಿಳಂಬವಾದ ಕಾರಣ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
 

LEAVE A REPLY

Please enter your comment!
Please enter your name here