Home Uncategorized ಮೆಟ್ರೋ ರೈಲು ಸಂಪರ್ಕ ಉತ್ತಮಗೊಳಿಸಲು ಫೀಡರ್ ಬಸ್ ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಮೆಟ್ರೋ ರೈಲು ಸಂಪರ್ಕ ಉತ್ತಮಗೊಳಿಸಲು ಫೀಡರ್ ಬಸ್ ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

36
0

ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಮೇಟ್ರೋ ಸಂಚಾರ ಆರಂಭವಾದ ಬೆನ್ನಲ್ಲೇ, ಹೊರ ವರ್ತುಲ ರಸ್ತೆಯಲ್ಲಿನ ಪ್ರಮುಖ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳ ಸೇವೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ. ನವದೆಹಲಿ: ನೇರಳೆ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಮೇಟ್ರೋ ಸಂಚಾರ ಆರಂಭವಾದ ಬೆನ್ನಲ್ಲೇ, ಹೊರ ವರ್ತುಲ ರಸ್ತೆಯಲ್ಲಿನ ಪ್ರಮುಖ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಗಳ ಸೇವೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.

ವಾಹನ ದಟ್ಟಣೆ ಕಡಿಮೆ ಮಾಡಲು ಕೊನೆಯ ನಿಲ್ದಾಣದೊಂದಿಗೆ ಮೆಟ್ರೋ ಸಂಪರ್ಕವನ್ನು ಬೆಸೆಯುವುದಕ್ಕೆ ಫೀಡರ್ ಬಸ್ ಗಳಿಗೆ ಚಾಲನೆ ನೀಡಲಾಗಿದೆ. ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ 35 ಫೀಡರ್ ಬಸ್ ಗಳಿಗೆ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಸೋಮವಾರದಿಂದ ಆರಂಭವಾಗಿರುವ ಹೊಸ ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲು ಸದ್ಯಕ್ಕೆ 35 ಫೀಡರ್ ಬಸ್ ಗಳ ಸೇವೆಯನ್ನು ಕಲ್ಪಿಸಲಾಗಿದೆ. ಹೆಚ್ಚು ಜನಸಂಚಾರ ಇರುವ ಸಮಯದಲ್ಲಿ ಪ್ರತಿ 5 ನಿಮಿಷಕ್ಕೆ ಒಮ್ಮೆ ಬಸ್ ಗಳ ಲಭ್ಯತೆ ಇರಲಿದೆ. ಜನ ಸಂಚಾರ ಹೆಚ್ಚು ಇರದ ಪ್ರದೇಶಗಳಲ್ಲಿ ಪ್ರತಿ 8 ನಿಮಿಷಗಳಿಗೆ ಒಮ್ಮೆ ಬಸ್ ಲಭ್ಯತೆ ಇರಲಿದೆ. 

ಇದನ್ನೂ ಓದಿ: ನಮ್ಮ ಮೆಟ್ರೋ: ಎರಡು ನೇರಳೆ ಹೊಸ ಮಾರ್ಗಗಳ ಕಾರ್ಯಾರಂಭ; ಪ್ರಯಾಣಿಕರು ಫುಲ್ ಖುಷ್!

ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಪ್ರಮಖ 2 ಮಾರ್ಗಗಳಿಗೆ ಬಿಎಂಟಿಸಿ ಫೀಡರ್ ಗಳಿಗೆ ಚಾಲನೆ ನೀಡಿದೆ. ಇದರಿಂದಾಗಿ ಹೊರ ವರ್ತುಲ ರಸ್ತೆಯಲ್ಲಿರುವ ಟೆಕ್ ಕಾರಿಡಾರ್-ಮೆಟ್ರೋ ನಡುವೆ ಸಂಚರಿಸುವವರಿಗೆ ಸಹಾಯವಾಗಲಿದೆ.

ಬಿಎಂಟಿಸಿ ಪ್ರಕಾರ, ಕೆಆರ್ ಪುರ ಮೆಟ್ರೊ ನಿಲ್ದಾಣದಿಂದ ಮಹದೇವಪುರ, ಮಾರತ್ತಹಳ್ಳಿ ಸೇತುವೆ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್‌ ಮೊದಲ ಫೀಡರ್ ಮಾರ್ಗವಾಗಿದೆ. ಎರಡನೇ ಮಾರ್ಗದಲ್ಲಿ ಮಾರತಹಳ್ಳಿಯ ಮೂಲಕ ಕುಂದಲಹಳ್ಳಿ, ಐಟಿಪಿಎಲ್ ಮತ್ತು ಗರುಡಾಚಾರ್ಪಾಳ್ಯ, ಕೆಆರ್ ಪುರ ಮೆಟ್ರೋ ನಿಲ್ದಾಣಗಳಿಗೆ ಸೇವೆಯನ್ನು ಒಳಗೊಂಡಿರುತ್ತದೆ.

ಹೋಪ್ ಫಾರ್ಮ್, ಐಟಿಪಿಎಲ್, ಗ್ರಾಫೈಟ್ ಇಂಡಿಯಾ, ಎಇಸಿಎಸ್ ಲೇಔಟ್ ಗೇಟ್ ಮೂಲಕ ಕಾಡುಗೋಡಿಗೆ ಸಂಪರ್ಕ ಕಲ್ಪಿಸುವ ಮತ್ತೊಂದು ಮಾರ್ಗವನ್ನು ಮತ್ತು ಹೋಪ್ ಫಾರ್ಮ್, ವರ್ತೂರು ಕೋಡಿ ಮತ್ತು ಸಿದ್ದಾಪುರ ಮೂಲಕ ಕಾಡುಗೋಡಿಯಿಂದ ಮಾರತ್ತಹಳ್ಳಿಗೆ ಮತ್ತೊಂದು ಮಾರ್ಗವನ್ನು ಪರಿಚಯಿಸಲಾಗಿದೆ.

LEAVE A REPLY

Please enter your comment!
Please enter your name here