ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿಜೀವನದ ದೊಡ್ಡ ಕನಸನ್ನು ನನಸಾಗಿಸಿದ್ದಾರೆ. ಭಾನುವಾರ ನಡೆದ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸುವ ಮೂಲಕ ಅರ್ಜೆಂಟೀನಾ ತಂಡವನ್ನು ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಮಾಡಿದ್ದಾರೆ. ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಬಳಿಕ ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ಗುಡ್ಬೈ ಹೇಳುತ್ತಾರೆ ಎಂದು ವರದಿಯಾಗಿತ್ತು. ಫೈನಲ್‌ಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಸ್ಸಿ ಕೂಡ ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಹೇಳಿಕೊಂಡಿದ್ದರು. ಆದರೀಗ ತಮ್ಮ ನಿರ್ಧಾರವನ್ನು ಮೆಸ್ಸಿ ಬದಲಿಸಿದಂತೆ ತೋರುತ್ತಿದೆ. ಪಂದ್ಯ ಮುಗಿದ ಬಳಿಕ ತಮ್ಮ ಭವಿಷ್ಯದ ಬಗ್ಗೆ ಹಲವು ಮಾಹಿತಿಗಳನ್ನು ಮೆಸ್ಸಿ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಮುಖ ವಿಚಾರವೆಂದರೆ ಮೆಸ್ಸಿಯ ನಿವೃತ್ತಿ ವಿಚಾರ. ಈ ಬಗ್ಗೆ ಮಾತನಾಡಿರುವ ಮೆಸ್ಸಿ ತಾನು ನಿವೃತ್ತಿಯಾಗುತ್ತಿಲ್ಲ, ಬದಲಿಗೆ ಅರ್ಜೆಂಟೀನಾ ಪರ ಆಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ.
2. ಮೆಸ್ಸಿ ಹೇಳಿದ್ದೇನು?
ತನ್ನ ವೃತ್ತಿ ಜೀವನದ ಐದನೇ ವಿಶ್ವಕಪ್ ಆಡಿದ ಮೆಸ್ಸಿ, ಈ ಮೂಲಕ ಐದು ವಿಶ್ವಕಪ್‌ಗಳನ್ನು ಆಡಿದ ಆರನೇ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ ಫೈನಲ್‌ಗೂ ಮುನ್ನ ಮೆಸ್ಸಿ ಇದು ಬಹುಶಃ ನನ್ನ ಕೊನೆಯ ವಿಶ್ವಕಪ್ ಎಂದು ಹೇಳಿದ್ದರು. ಅಂದಿನಿಂದ ಮೆಸ್ಸಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೆಸ್ಸಿ, “ಇದೆಲ್ಲವನ್ನೂ ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ, ಫೈನಲ್ ತಲುಪುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸುತ್ತಿದ್ದೇನೆ. ಮುಂದಿನ ವಿಶ್ವಕಪ್‌ಗೆ ಹಲವು ವರ್ಷಗಳು ಬಾಕಿಯಿದ್ದು, ನಾನು ಮತ್ತೆ ಮುಂದಿನ ವಿಶ್ವಕಪ್ನಲ್ಲಿ ಆಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಈ ರೀತಿ ನನ್ನ ಪ್ರಯಾಣವನ್ನು ಮುಗಿಸುವುದು ಉತ್ತಮವಾಗಿದೆ” ಎದು ಹೇಳಿಕೊಂಡಿದ್ದರು.