Home Uncategorized ಮೈಸೂರು: ಜೆಡಿಎಸ್​ನ ಇನ್ನೊಂದು ಪಟ್ಟಿ ಬಂದರೂ ಬರಬಹುದು, ಮೊದಲ ಪಟ್ಟಿ ಅಂತಿಮ ಅಲ್ಲ; ಹೆಚ್​ಡಿ ದೇವೇಗೌಡ

ಮೈಸೂರು: ಜೆಡಿಎಸ್​ನ ಇನ್ನೊಂದು ಪಟ್ಟಿ ಬಂದರೂ ಬರಬಹುದು, ಮೊದಲ ಪಟ್ಟಿ ಅಂತಿಮ ಅಲ್ಲ; ಹೆಚ್​ಡಿ ದೇವೇಗೌಡ

17
0

ಮೈಸೂರು: ರಾಜ್ಯದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ಲಾನ್ ರೂಪಿಸಿ ಮತದಾರರ ಮನಸ್ಸು ಗೆಲ್ಲಲು ಮುಂದಾಗಿದ್ದಾರೆ. ಸದ್ಯ ಜೆಡಿಎಸ್(JDS)​​ ಪಕ್ಷದ ಮೊದಲ ಪಟ್ಟಿ ಅಂತಿಮ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತೆ, ನಿತ್ಯ ಸರ್ವೆ ನಡೆಯುತ್ತಿದೆ ಎಂದು ಮೈಸೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ(HD Deve Gowda) ಹೇಳಿದ್ದಾರೆ.ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಜನವರಿಯಿಂದ ಚುನಾವಣಾ ಪ್ರಚಾರಕ್ಕೆ ಇಳಿಯುವುದಾಗಿ ತಿಳಿಸಿದರು. ಈ ವೇಳೆ ಜೆಡಿಎಸ್​​ ಪಕ್ಷದ ಮೊದಲ ಪಟ್ಟಿ ಅಂತಿಮ ಅಲ್ಲ. ಪ್ರತಿದಿನ ಪಟ್ಟಿ ಬದಲಾವಣೆ ಆಗುತ್ತೆ, ನಿತ್ಯ ಸರ್ವೆ ನಡೆಯುತ್ತಿದೆ. ಕುಮಾರಸ್ವಾಮಿ ಜೊತೆ ಶಿವಲಿಂಗೇಗೌಡ ಮಾತನಾಡಿದ್ದಾರೆ. ದ್ವಂದ್ವ ಇದೆ ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಪ್ರೀತಂ ಗೌಡಗೆ ಯಡಿಯೂರಪ್ಪ ಸರ್ಕಾರ ಸರ್ವಶಕ್ತಿ ಕೊಟ್ಟಿದೆ. ಕಾಮಗಾರಿಗಳಿಗೆ ನೀಡಿದ ಅನುದಾನದಿಂದ ಹಣ ಸಂಪಾದಿಸಿದ್ದಾರೆ. ಪ್ರೀತಂ ಗೌಡ ಬೆದರಿಕೆಗೆ ನಾವು ಬಗ್ಗುವುದಿಲ್ಲ. ಹಾಸನ ನಗರದಲ್ಲಿ ಜೆಡಿಎಸ್​ನಿಂದ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಹೆಚ್​ಡಿಕೆ, ರೇವಣ್ಣ ಚರ್ಚಿಸಿ ಅಂತಿಮವಾಗಿ ನಿರ್ಣಯ ಮಾಡ್ತಾರೆ. ಯಾರು ಮುಖ್ಯಮಂತ್ರಿಯಾಗಬೇಕೆಂಬುದು ಜನ ತೀರ್ಮಾನಿಸ್ತಾರೆ ಎಂದರು.

ಇದನ್ನೂ ಓದಿ: ಅಸ್ಪೃಶ್ಯ ಪದ ಬಳಕೆ ವಿವಾದ: ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು, ಸಿದ್ದರಾಮಯ್ಯ ಕೂಡ ಬಳಸಿದ್ದರು -ಹೆಚ್​ಡಿ ಕುಮಾರಸ್ವಾಮಿ

ಜನವರಿಯಿಂದ ಹೆಚ್​​.ಡಿ.ದೇವೇಗೌಡ ಚುನಾವಣಾ ಪ್ರಚಾರ

ಮುಂದಿನ ತಿಂಗಳಿನಿಂದ ನಾನು ಪ್ರಚಾರಕ್ಕೆ ಹೋಗುತ್ತೇನೆ. ಕುಮಾರಸ್ವಾಮಿ ಸೇರಿ ಎಲ್ಲರೂ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ಮುಖಂಡರು, ಶಾಸಕರು, ಮಾಜಿ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಮನೆ ಮನೆಗೆ ತೆರಳಿ ಪಕ್ಷದ ಪರವಾಗಿ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ ಎಂದು ಮೈಸೂರಿನಲ್ಲಿ ಹೆಚ್​ಡಿ ದೇವೇಗೌಡ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here