ಮೈಸೂರು: ಮೈಸೂರು ದಸರಾ ಮಹೋತ್ಸವ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದು, ದಸರಾ ವೇಳೆ ಸ್ಟ್ರೀಟ್ ಫೆಸ್ಟಿವಲ್ ಆಯೋಜನೆಗೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ಮೈಸೂರು ಬ್ರಾಂಡ್ ಹೆಸರಿನಲ್ಲಿ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಮೈಸೂರು ಜಿಲ್ಲಾಡಳಿತ ಪ್ಲಾನ್ ಮಾಡುತ್ತಿದೆ. ಈ ಹಿಂದೆ ನಡೆಸಲಾಗಿದ್ದ ಸ್ಟ್ರೀಟ್ ಫೆಸ್ಟಿವಲ್ ವಿವಾದಕ್ಕೀಡಾಗಿತ್ತು. ಈ ಹಿಂದೆ ನಡೆದ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಯುವತಿಯರ ಜೊತೆ ಪುಂಡರು ಅಸಭ್ಯವಾಗಿ ವರ್ತಿಸಿದ್ರು. ಇದಾದ ಬಳಿಕ ಸ್ಟ್ರೀಟ್ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಕೋಕ್ ನೀಡಲಾಗಿತ್ತು. ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮಲ್ಲಿ ಬೇಡ ಎಂಬ ವಿರೋಧ ಸಹ ವ್ಯಕ್ತವಾಗಿತ್ತು.
Black Tea benefits: ಪ್ರತಿದಿನ ಬ್ಲ್ಯಾಕ್ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಸಾಂಪ್ರದಾಯಿಕ ದಸರಾ ನಡೆಸಿ ಎಂಬ ಕೂಗು ಎದ್ದಿತ್ತು. ಇದೀಗ ಅಕ್ಟೋಬರ್ 22 ರಂದು ಮತ್ತೊಮ್ಮೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಕ್ಟೋಬರ್ 22 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಜಿಲ್ಲಾಡಳಿತ ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದ್ದು, ತಾನೇ ಬಹಿಷ್ಕರಿಸಿದ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡುತ್ತಾ ಜಿಲ್ಲಾಡಳಿತ ಕಾದು ನೋಡಬೇಕಿದೆ.
The post ಮೈಸೂರು ದಸರಾ ಮಹೋತ್ಸವ: ಸ್ಟ್ರೀಟ್ ಫೆಸ್ಟಿವಲ್ ನಡೆಸಲು ಮುಂದಾದ ಜಿಲ್ಲಾಡಳಿತ appeared first on Ain Live News.