Home ಕರ್ನಾಟಕ ಮೈಸೂರು : ಮಾಜಿ ಕಾರ್ಪೊರೇಟರ್‌ ಸಹೋದರನ ಹತ್ಯೆ

ಮೈಸೂರು : ಮಾಜಿ ಕಾರ್ಪೊರೇಟರ್‌ ಸಹೋದರನ ಹತ್ಯೆ

24
0

ಮೈಸೂರು: ಇಲ್ಲಿನ ರಾಜೀವ್‌ ನಗರದ ನಿಮ್ರಾ ಮಸೀದಿ ಬಳಿ ಶುಕ್ರವಾರ ಸಂಜೆ ಮೌಲಾನಾ ಹಾಫಿಲ್‌ ಅಕ್ಮಲ್‌ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

ಹತ್ಯೆಗೀಡಾದ ಅಕ್ಮಲ್‌ ಅವರು ಮಾಜಿ ಕಾರ್ಪೊರೇಟರ್ ಅಯಾಝ್‌ ಪಂಡು ಅವರ ಸಹೋದರ ಎಂದು ತಿಳಿದುಬಂದಿದೆ. ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಬೇಕರಿವೊಂದರ ಮುಂಭಾಗ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಸ್ಕೂಟರ್ ನಲ್ಲಿ ತೆರಳುತ್ತಿದ್ದ ಅಕ್ಮಲ್ ರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉದಯಗಿರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

LEAVE A REPLY

Please enter your comment!
Please enter your name here