ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಮುಂದಿನ ಸಚಿವ ಸಂಪುಟ ಪುನರ್ರಚನೆ ವೇಳೆ ಸಚಿವ ಸ್ಥಾನಕ್ಕೆ ಪರಿಗಣಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ಬಳಿಕ, ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಸೇರಿದಂತೆ ಹಿರಿಯ ಪಕ್ಷದ ನಾಯಕರ ಬೆಂಬಲ ದೊರಕಿದೆ.
ಡಿ ಕೆ ಶಿವಕುಮಾರ್ ಅವರು ತಾವೂ ಮೊದಲ ಬಾರಿಗೆ ಶಾಸಕರಾಗಿದ್ದಾಗಲೇ ಸಚಿವ ಸ್ಥಾನ ಪಡೆದಿದ್ದೇನೆ ಹೇಳಿದರು. ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿರುವ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡೆ. ನನಗೆ ಆ ಪತ್ರ ಬಂದಿಲ್ಲ. ಪ್ರತಿಯೊಬ್ಬರೂ ಸಚಿವರಾಗಲು ಬಯಸುತ್ತಾರೆ. ನರೇಂದ್ರ ಮೋದಿ ಅವರು ಶಾಸಕರಾಗದೆ ಮುಖ್ಯಮಂತ್ರಿಯಾಗಲಿಲ್ಲವೇ? ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ನಾವು ಎಷ್ಟು ಕಾಲ ಒಂದೇ ಸ್ಥಾನದಲ್ಲಿ ಇರಬಹುದು ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.
ಯುವ ಮುಖಗಳನ್ನು ಸಚಿವ ಸಂಪುಟಕ್ಕೆ ಸೇರಿಸುವುದರಿಂದ ಹೊಸ ಆಲೋಚನೆಗಳು ಮೂಡಿಬರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಹೊಸಬರು ಸಚಿವ ಸಂಪುಟಕ್ಕೆ ಬರಬೇಕು. ಅವರನ್ನು ಸೇರಿಸುವುದನ್ನು ಬೆಂಬಲಿಸುವವರಲ್ಲಿ ನಾನು ಒಬ್ಬನು. ಹೊಸಬರನ್ನು ಬೆಳೆಸಬೇಕು. ಈ ವಿಷಯದಲ್ಲಿ ಪಕ್ಷವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.
ಇನ್ನು ಗೃಹ ಸಚಿವ ಪರಮೇಶ್ವರ ಅವರು, ಹೊಸ ಶಾಸಕರು ಅನುಭವ ಪಡೆಯಲು ಅವಕಾಶ ಕೇಳುತ್ತಿದ್ದಾರೆ, ಅವರನ್ನು ಸೇರಿಸುವುದರಲ್ಲಿ ತಪ್ಪಿಲ್ಲ. ಅವರ ಬೇಡಿಕೆ ತಪ್ಪಲ್ಲ. ಈ ವಿಷಯವನ್ನು ಹೈಕಮಾಂಡ್ ಮತ್ತು ಮುಖ್ಯಮಂತ್ರಿ ತೀರ್ಮಾನಿಸಲಿದ್ದಾರೆ ಎಂದು ಹೇಳಿದರು.
‘ಮಹದೇವಪ್ಪರೂ ಹೈಕಮಾಂಡ್ನ ಭಾಗವೇ’
ಸಾಮಾಜ ಕಲ್ಯಾಣ ಸಚಿವ ಡಾ ಹೆಚ್.ಸಿ. ಮಹದೇವಪ್ಪ ಅವರು ದಲಿತ ಮುಖ್ಯಮಂತ್ರಿ ಕುರಿತು ನೀಡಿದ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಶಿವಕುಮಾರ್ ಅವರು, ಅವರೂ ಹೈಕಮಾಂಡ್ನ ಭಾಗವೇ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಿದ್ದರೆ ಅದರ ಮಾಹಿತಿ ಅವರಿಗೆ ಇರಬಹುದು. ಅದಕ್ಕಾಗಿಯೇ ಅವರು ದಲಿತ ಮುಖ್ಯಮಂತ್ರಿಯ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಮಹದೇವಪ್ಪ ಅವರ ಹೇಳಿಕೆಯನ್ನು ನೋಡಿರುವುದನ್ನು ಒಪ್ಪಿಕೊಂಡ ಅವರು, ಆದರೆ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಅವರಿಗೆ ಮಾಹಿತಿ ಇರಬಹುದು, ಆದರೆ ನನಗೆ ಇಲ್ಲ ಎಂದು ಹೇಳಿದರು.
@DKShivakumar says he never said that he will form a cabinet as it’s @CMofKarnataka @siddaramaiah stated that he will reshuffle the cabinet.@XpressBengaluru @AshwiniMS_TNIE pic.twitter.com/a5LcitMbMe
— Hirehalli Bhyraiah Devaraj (@swaraj76) February 24, 2026
ನಮ್ಮ ಇಲಾಖೆಗೆ ಸಂಬಂಧಿಸಿದ ಕೆಲವು ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಬೇಕಿದೆ. ನಗರಾಭಿವೃದ್ಧಿ ಇಲಾಖೆಯ ಯೋಜನೆಗಳಿಗೆ 1 ಲಕ್ಷ ಕೋಟಿ ರೂಪಾಯಿ ನೀಡಲಾಗುತ್ತಿದೆ, ಆದರೆ ಅದು ದೊಡ್ಡ ನಗರಗಳಿಗೆ ಮಾತ್ರ ಎಂದು ಹೇಳಲಾಗುತ್ತಿದೆ. ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಪ್ರಸ್ತಾವನೆ ತಯಾರಿಸುವ ಬಗ್ಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಚಿವರ ಹೇಳಿಕೆಗಳ ಬಗ್ಗೆ ಮೌನವಾಗಿರುವುದಾಗಿ ಕೇಳಿದ ಪ್ರಶ್ನೆಗೆ,
ಸಚಿವರು ಮತ್ತು ಶಾಸಕರನ್ನು ನಿಯಂತ್ರಿಸುವ ಜವಾಬ್ದಾರಿ ಮುಖ್ಯಮಂತ್ರಿಯವರದು. ಪಕ್ಷದ ಅಧ್ಯಕ್ಷನಾಗಿ ನಾನು ಈ ವಿಷಯಗಳನ್ನು ದೆಹಲಿಗೆ ತಿಳಿಸುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.
