Home Uncategorized ಮೊಬೈಲ್ ಅಂಗಡಿಗೆ ನುಗ್ಗಿ ಸೊತ್ತು ಕಳವು

ಮೊಬೈಲ್ ಅಂಗಡಿಗೆ ನುಗ್ಗಿ ಸೊತ್ತು ಕಳವು

27
0

ಮಲ್ಪೆ, ಡಿ.16: ಮಲ್ಪೆ ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿ ಯೊಂದಕ್ಕೆ ಡಿ.13ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಕೋಟತಟ್ಟು ಪಡುಕೆರೆಯ ಸಂದೀಪ ಎಂಬವರ ನಿಧಿ ಮೊಬೈಲ್ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು, ಒಂದು ಲಕ್ಷ ರೂ. ನಗದು, 33,000 ರೂ. ಮೌಲ್ಯದ ಒಂದು ಲ್ಯಾಪ್‌ಟಾಪ್, 11,000ರೂ. ಮೌಲ್ಯದ ಸಿಸಿಟಿವಿ ಡಿವಿಆರ್, ಹಾರ್ಡ್‌ ಡಿಸ್ಕ್ ಪವರ್ ಸಪ್ಲೈರ್ ಮತ್ತು 35,000ರೂ. ಮೌಲ್ಯದ ಹಳೆಯ ಮೊಬೈಲ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವು ದಾಗಿ ದೂರಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here