Home Uncategorized ಮೋದಿಯವರ ಆಶೀರ್ವಾದ ಬೇಕಿತ್ತು, ಹೀಗಾಗಿ ಮಂಡಿಯೂರಿ ತಲೆ ಬಾಗಿದ್ದೆ: ಆರ್'ಎಸ್​ಎಸ್ ಕಾರ್ಯಕರ್ತ ಚೇತನ್ ರಾವ್

ಮೋದಿಯವರ ಆಶೀರ್ವಾದ ಬೇಕಿತ್ತು, ಹೀಗಾಗಿ ಮಂಡಿಯೂರಿ ತಲೆ ಬಾಗಿದ್ದೆ: ಆರ್'ಎಸ್​ಎಸ್ ಕಾರ್ಯಕರ್ತ ಚೇತನ್ ರಾವ್

21
0

ಹಲವಾರು ವರ್ಷಗಳಿಂದ ಹಿಂದೂ ಪರ ಸಂಘಟನೆಯಲ್ಲಿ ತೊಡಗಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಚೇತನ್ ರಾವ್ ಅವರು, ಇದ್ದಕ್ಕಿದ್ದಂತೆಯೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಪೋಟೋ ಕಾರಣವಾಗಿದೆ. ಹುಬ್ಬಳ್ಳಿ: ಹಲವಾರು ವರ್ಷಗಳಿಂದ ಹಿಂದೂ ಪರ ಸಂಘಟನೆಯಲ್ಲಿ ತೊಡಗಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಚೇತನ್ ರಾವ್ ಅವರು, ಇದ್ದಕ್ಕಿದ್ದಂತೆಯೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಪೋಟೋ ಕಾರಣವಾಗಿದೆ.

ಪ್ರಧಾನ ಮಂತ್ರಿ ಐಐಟಿ-ಧಾರವಾಡದ ಹೊಸ ಕ್ಯಾಂಪಸ್ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಮಾರ್ಚ್ 12 ರಂದು ಧಾರವಾಡಕ್ಕೆ ಆಗಮಿಸಿದ್ದರು. ಹೆಲಿಕಾಪ್ಟರ್‌ನಿಂದ ಬಂದಿಳಿದ ಮೋದಿ ಅವರನ್ನು ಪಕ್ಷದ ಕಾರ್ಯಕರ್ತರು ಕಡಿಮೆ ಸಂಖ್ಯೆಯಲ್ಲಿ ಸ್ವಾಗತಿಸಿದರು.

ಪ್ರಧಾನಿಯವರ ಕಟ್ಟಾ ಅಭಿಮಾನಿಯಾಗಿದ್ದ ಚೇತನ್ ರಾವ್ ಅವರು ಮೋದಿಯವರನ್ನು ಕಂಡ ಕೂಡಲೇ ನೆಲದ ಮೇಲೆ ಮಂಡಿಯೂರಿ ತಲೆ ಬಾಗಿದರು. ಅದಕ್ಕೆ ಪ್ರತಿಯಾಗಿ ಪ್ರಧಾನ ಮೋದಿಯವರೂಕೂಡ ಬಹುತೇಕ ನೆಲವನ್ನು ಮುಟ್ಟಿದ ರೀತಿಯಲ್ಲಿ ಬಾಗಿ ನಮಸ್ಕರಿಸಿದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋದಿಯವರೂ ಕೂಡ ಬಾಗಿ ನನಗೆ ನಮಸ್ಕರಿಸಿದ್ದು ಗೊತ್ತಿರಲಿಲ್ಲ. ಮೋದಿ ಒಬ್ಬ ಮಹಾನ್ ನಾಯಕ ಮತ್ತು ಆಧ್ಯಾತ್ಮಿಕ ವ್ಯಕ್ತಿ. ಅವರು ನನ್ನ ಮುಂದೆ ಬಂದಾಗ ನಾನು ಅವರ ಆಶೀರ್ವಾದ ಪಡೆಯಲು ಬಯಸಿದ್ದೆ. ಅವರ ಪಾದಗಳನ್ನು ಸ್ಪರ್ಶಿಸಲು ಬಗ್ಗಿದ್ದೆ. ನಾನು ಎದ್ದಾಗ ಅವರು ಅಲ್ಲಿಂದ ಹೊರಟು ಹೋಗಿದ್ದರು. ಮೋದಿಯವರು ಮರಳಿ ನಮಸ್ಕರಿಸಿದ್ದನ್ನು ನೋಡಿ ನೋಡಿರಲಿಲ್ಲ. ಫೋಟೋಗಳಲ್ಲಿ ನೋಡಿದೆ ಎಂದು ಚೇತನ್ ಅವರು ಹೇಳಿದ್ದಾರೆ.

“ಮೋದಿ ಒಬ್ಬ ಮಹಾನ್ ನಾಯಕ. ಅವರು ಎಲ್ಲರನ್ನೂ ಗೌರವಿಸುತ್ತಾರೆ. ಪಕ್ಷದ ಚಿಕ್ಕ ಕಾರ್ಯಕರ್ತರನ್ನೂ ಗೌರವಿಸುತ್ತಾರೆ ಎಂಬುದನ್ನು ಈ ಫೋಟೋ ಸಾಬೀತು ಪಡಿಸಿದೆ ಎಂದು ವೈರಲ್ ಫೋಟೋದಲ್ಲಿ ಕಾಣಿಸಿಕೊಂಡಿರುವ ಮತ್ತೊಬ್ಬ ವ್ಯಕ್ತಿ ರಘು ಯೆಲ್ಲಕ್ಕನವರ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ಪ್ರತಿಕ್ರಿಯೆಯಿಂದ ಸಂಘದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ. ಮೋದಿಯವರ ಆಶೀರ್ವಾದ ಪಡೆದುಕೊಂಡಿದ್ದಕ್ಕೆ ಸದಸ್ಯರು ನನ್ನನ್ನು ಅಭಿನಂದಿಸಿದ್ದಾರೆ. ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಮೋದಿಯವರು ಕಾರಣ. ಕೇಸರಿ ಧ್ವಜ ಗೌರವಿಸುವುದನ್ನು ಸಂಘದಲ್ಲಿ ಹೇಳಿಕೊಡಲಾಗುತ್ತದೆ. ನಾವೆಲ್ಲೂ ಧ್ವಜಕ್ಕೆ ನಮಸ್ಕರಿಸುತ್ತೇವೆ. ಮೋದಿ ಜೊತೆಗೆ ಫೋಟೋ ಬಗ್ಗೆ ನನಗೆ ಆಲೋಚನೆಗಳೇ ಇರಲಿಲ್ಲ ಎಂದು ಚೇತನ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here