ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ‘ಕ್ರೈ ಪಿಎಂ’ ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ‘ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ’ ಎಂದಿದ್ದಾರೆ. ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ‘ಕ್ರೈ ಪಿಎಂ’ ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ‘ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ’ ಎಂದಿದ್ದಾರೆ.
ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್, ‘ಕೋವಿಡ್ ಬಿಕ್ಕಟ್ಟು ಅಥವಾ ಪುಲ್ವಾಮಾ ಸಂಭವಿಸಿದಾಗ ಅವರು ಎಂದಿಗೂ ಕಣ್ಣೀರು ಹಾಕಿಲ್ಲ. ಆದರೆ, ಈಗ ಅವರು ಕಣ್ಣೀರು ಸುರಿಸುತ್ತಾ ಜನರ ಮುಂದೆ ಬಂದಿದ್ದಾರೆ’ ಎಂದರು. ಕೆಪಿಸಿಸಿ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮೋದಿ ಅವರು ‘ವಿಕ್ಟಿಮ್ ಕಾರ್ಡ್’ ಬಳಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವಿಟರ್‌ನಲ್ಲಿ ಬಿಜೆಪಿಯನ್ನು ಲೇವಡಿ ಮಾಡುತ್ತಾ, ‘ಪ್ರತಿ ಚುನಾವಣೆಯ ಬಿಜೆಪಿಯ ಪ್ರಚಾರದ ಥೀಮ್ ಏನೆಂದರೆ, ‘ಮುಜೆ ಗಲಿಯಾ ದಿಯಾ’ (ಅವರು ನನ್ನನ್ನು ನಿಂದಿಸಿದರು) ಎಂಬುದಾಗಿರುತ್ತದೆ’ ಎಂದಿದ್ದಾರೆ.
ಹತ್ತಾರು ಕಾಂಗ್ರೆಸ್ ನಾಯಕರು ಟ್ವೀಟ್ ಮಾಡಿದ್ದು, ‘PAYCM’ ನಂತೆ ‘CRYPM’ ಎಂದು ಟ್ವೀಟ್ ಮಾಡಿದ್ದಾರೆ. ‘ಪ್ರಧಾನಿ ಕಾರ್ಯಾಲಯವು ರೈತರ ಅಥವಾ ಜನರ ಸಮಸ್ಯೆ ಅಥವಾ ದೂರುಗಳನ್ನು ಸಂಗ್ರಹಿಸುವ ಬದಲು ನಿಂದನೆಗಳನ್ನು ಎಣಿಸುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯ ನಂತರ ಈ ಪೋಸ್ಟರ್‌ಗಳೊಂದಿಗೆ ಕಾಂಗ್ರೆಸ್ ಪ್ರಚಾರ ನಡೆಸಿತು.