ಕಾರವಾರ: ಎರಡು ಕಾರುಗಳ ನಡುವೆ ಅಪಘಾತ (accident) ಉಂಟಾಗಿದ್ದು, ಯಕ್ಷಗಾನ ಕಲಾವಿದ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಮದ ಬಳಿ ನಡೆದಿದೆ. ತಿಮ್ಮಪ್ಪ ಭಾಗ್ವತ್ ಬಾಳೆಹದ್ದ (65) ಸಾವನ್ನಪ್ಪಿದ ಕಲಾವಿದ. ಯಕ್ಷಗಾನದ ಪಟ್ಟು ಮತ್ತು ರಾಗಗಳಲ್ಲಿ ವಿಶೇಷ ಪರಿಣಿತ ಪಡೆದಿದ್ದರು. ಸಾಕಷ್ಟು ಕಲಾ ಪ್ರದರ್ಶನ ನೀಡಿದ್ದರು. ಅಪಘಾತದಲ್ಲಿ ಕಲಾವಿದ ತೀವ್ರ ಗಾಯಗೊಂಡಿದ್ದರು. ಹತ್ತಿರದ ಶಿರಶಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಲಾವಿದ ಕೊನೆಯುಸಿರೆಳೆದಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸೈಟ್ ಖರೀದಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದವನ ಬಂಧನ
ಬೆಂಗಳೂರು: ಸೈಟ್ ಖರೀದಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗ ಸಿಇಎನ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಂಧ್ರ ಮೂಲದ ವಿನೋದ್ ಕುಮಾರ್ ರೆಡ್ಡಿ ಬಂಧಿತ ಆರೋಪಿ. ಬಂಧಿತನ ಬಳಿ ಇದ್ದ 1.40 ಲಕ್ಷ ನಗದು, ಒಂದು ಬೊಬೈಲ್ ಜಪ್ತಿ ಮಾಡಲಾಗಿದೆ. 10ಕ್ಕೂ ಹೆಚ್ಚು ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ವಿನೋದ್ ವಂಚಿಸಿದ್ದ. ಬೆಂಗಳೂರು, ಹುಬ್ಬಳ್ಳಿ, ಗೋವಾ, ಹೈದರಾಬಾದ್ನಲ್ಲೂ ವಂಚನೆ ಆರೋಪ ಕೇಳಿಬಂದಿದೆ. OLX, ವೆಬ್ಸೈಟ್ನಲ್ಲಿ ಸೈಟ್ ಮಾರಾಟ ಮಾಡುವವರಿಗೆ ವಂಚಿಸಿದ್ದಾನೆ. ಈ ಬಗ್ಗೆ ಈಶಾನ್ಯ ವಿಭಾಗ ಸಿಇಎನ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಆರೋಪ
ಬೆಂಗಳೂರು: ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಆರೋಪ ಮಾಡಿರವಂತಹ ಘಟನೆ ನಗರದ ಉಲ್ಲಾಳದ ಎಂವಿ ಲೇಔಟ್ ಬಳಿ ನಡೆದಿದೆ. ಮಹೇಶ್ವರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ವೆಯಾಗಿ ಮೂರು ತಿಂಗಳಿಗೆ ಪತ್ನಿಯಿಂದ ಕಿರುಕುಳ ಆರೋಪಿಸಲಾಗಿದೆ. ವಿನಾಕಾರಣ ಪತಿ ಜೊತೆ ಪತ್ನಿ ಕವನ ಗಲಾಟೆ ಮಾಡುತ್ತಿದ್ದರು. ಹಿರಿಯರಿಗೆ ಗೌರವ ಕೊಡದೆ ಅವಮಾನಿಸುತ್ತಿದ್ದಳು. ಕವನ ಕಿರುಕುಳಕ್ಕೆ ರೋಸಿ ಮಹೇಶ್ವರ ಆತ್ಮಹತ್ಯೆ ಆರೋಪ ಮಾಡಿದ್ದಾರೆ. ಕಳೆದ 5 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 21-08 -2022 ರಂದು ದಂಪತಿ ಮದ್ವೆಯಾಗಿದ್ದರು. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಿಟ್ ಅಂಡ್ ರನ್, 3 ಸಾವು ಪ್ರಕರಣಕ್ಕೆ ಟ್ವಿಸ್ಟ್
ಆನೇಕಲ್: ಹಿಟ್ ಅಂಡ್ ರನ್ ವೇಳೆ ನಡೆದ ಅಪಾಘಾತದಲ್ಲಿ ಮೂವರು ಯುವಕರ ಸಾವನ್ನಪ್ಪಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಯುವಕರಿಗೆ ಗುದ್ದಿದ್ದು ಒಂದು ಲಾರಿ ಅಲ್ಲ. ಎರಡು ಲಾರಿ ಗುದ್ದಿರುವ ಶಂಕೆ ವ್ಯಕ್ತವಾಗಿದೆ. ವೇಗದ ಜಿದ್ದಿಗೆ ಬಿದ್ದ ಎರಡು ಲಾರಿಗಳು ಓವರ್ ಟೇಕ್ ಮಾಡಲು ಹೋಗಿ ಮೂವರು ಯುವಕರಿಗೆ ಗುದ್ದಿರುವ ಸಾಧ್ಯತೆ ಇದೆ. ಏಕಪಥ ರಸ್ತೆಯಲ್ಲಿ ವೇಗವಾಗಿ ಲಾರಿ ಚಾಲಾಯಿಸಿಕೊಂಡು ಓವರ್ಟೇಕ್ ಮಾಡಲು ಹೋದಾಗ ಎಡ ಬದಿಗೆ ಬಂದ ಲಾರಿಯಿಂದ ತಪ್ಪಿಸಿಕೊಳ್ಳಲು ಬಲ ಬದಿಗೆ ಯುವಕರು ಸರಿದಿದಿದ್ದಾರೆ. ಈ ವೇಳೆ ಬಲ ಬದಿಯಿಂದ ಬಂದ ಲಾರಿಗೆ ಸಿಕ್ಕಿ ಯುವಕರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳದಲ್ಲಿ ಸಿಕ್ಕ ಲಾರಿಯ ಅವಶೇಷಗಳ ಪರಿಶೀಲನೆ ನಡೆಸಿದ ಪೊಲೀಸರು ಲಾರಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: ಲಾಡ್ಜ್ನಲ್ಲಿ ನಗ್ನ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ: ರೂಮ್ಗೆ ಬಂದು ಹೋಗಿದ್ದ ಮಹಿಳೆ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಮೃತರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ಸೋಜಿಗವೆಂಬುವಂತೆ ಮೃತರೆಲ್ಲರೂ ತಂದೆ ತಾಯಿಯ ಒಂದೇ ಸಂತಾನದವರಾಗಿದ್ದಾರೆ. 13 ಸಾವಿರ ವೇತನಕ್ಕಾಗಿ ಬೆಂಗಳೂರಿಗೆ ಬಂದಿದ್ದ ಯುವಕರು, ಘಟನೆಯ ದಿನ ರಾತ್ರಿ 8 ಗಂಟೆಗೆ ಚಿಕನ್ ತರಲು ಮನೆಯಿಂದ ಹೊರಟಿದ್ದರು. ಉಳಿದ ಸ್ನೇಹಿತರಿಗೆ ಅನ್ನ ರೆಡಿ ಮಾಡಿ ಇಡಿ ಎಂದು ಹೇಳಿ ಹೋಗಿದ್ದರು. ಹೀಗೆ ಹೋದವರು ರಾತ್ರಿ 11 ಗಂಟೆಯಾದರೂ ವಾಪಸ್ ಬರದ ಸ್ನೇಹಿತರಿಗೆ ಪೊಲೀಸರು ಅಪಘಾತದ ಸುದ್ದಿ ತಿಳಿಸಿದಾಗಲೇ ತಿಳಿದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
