Home Uncategorized ಯುವನಿಧಿ ಯೋಜನೆಗೆ 19,392 ಅರ್ಜಿ ನೋಂದಣಿ

ಯುವನಿಧಿ ಯೋಜನೆಗೆ 19,392 ಅರ್ಜಿ ನೋಂದಣಿ

23
0

ಬೆಂಗಳೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ಡಿ.26ರಿಂದಲೇ ಪ್ರಾರಂಭವಾಗಿದ್ದು, ಜ.1ರವರೆಗೆ 19,392 ಅರ್ಜಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ದಾಖಲಾಗಿವೆ.

ಯುವ ನಿಧಿ ಯೋಜನೆಗೆ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಅಡಚಣೆ ಆಗದಂತೆ ಅನುಕೂಲ ಕಲ್ಪಿಸಲಾಗಿದೆ.

ಡಿ.26ರಿಂದ ಜನವರಿ 1ರ ಸಂಜೆ 6 ಗಂಟೆವರೆಗೆ ಬಾಗಲಕೋಟೆಯಿಂದ 1109, ಬಳ್ಳಾರಿ 675, ಬೆಳಗಾವಿ 2316, ಬೆಂಗಳೂರು ಗ್ರಾಮಾಂತರ 329, ಬೆಂಗಳೂರು ನಗರ 1974, ಬೀದರ್ 544, ತುಮಕೂರು 904, ದಕ್ಷಿಣ ಕನ್ನಡ 170, ಮೈಸೂರು 377, ಶಿವಮೊಗ್ಗ 844 ಚಿಕ್ಕಮಂಗಳೂರು 474, ಹಾಸನ 311 ಸೇರಿದಂತೆ ಒಟ್ಟು 19,392 ಅರ್ಜಿಗಳು ನೋಂದಣಿಯಾಗಿವೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here