ದೇಶದ ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುವ ಬದಲು ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯ ಕರಡು ಕಾನೂನನ್ನು ಬಿಡುಗಡೆ ಮಾಡುವಂತೆ ಮಂಗಳೂರು ಕೆಥೋಲಿಕ್ ಸಭಾ ಕೇಂದ್ರ ಸಮಿತಿ ಬುಧವಾರ… ಮಂಗಳೂರು: ದೇಶದ ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯಗಳಲ್ಲಿ ಗೊಂದಲ ಸೃಷ್ಟಿಸುವ ಬದಲು ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯ ಕರಡು ಕಾನೂನನ್ನು ಬಿಡುಗಡೆ ಮಾಡುವಂತೆ ಮಂಗಳೂರು ಕೆಥೋಲಿಕ್ ಸಭಾ ಕೇಂದ್ರ ಸಮಿತಿ ಬುಧವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಇಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಡಿಸೋಜಾ, ಯುಸಿಸಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಇತ್ತೀಚಿನ ನಡೆಯು ವಿವಿಧ ಸಮುದಾಯಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ ಎಂದರು.
ಇದನ್ನು ಓದಿ: ಯುಸಿಸಿ ಜಾರಿಗೊಳಿಸುವುದು ಆರ್ಟಿಕಲ್ 370 ರದ್ದು ಮಾಡಿದಷ್ಟು ಸುಲಭವಲ್ಲ: ಗುಲಾಂ ನಬಿ ಆಜಾದ್
ಭಾರತದ ಕಾನೂನು ಆಯೋಗವು ಪ್ರಶ್ನಾವಳಿಗಳನ್ನು ಹಂಚುತ್ತಿದೆ ಮತ್ತು ಅದರ ಬಗ್ಗೆ ವಿವಿಧ ಸಮುದಾಯಗಳ ಅಭಿಪ್ರಾಯಗಳನ್ನು ಕೇಳುವ ಮೂಲಕ ಸರ್ಕಾರ ಹೇಗಾದರೂ ಮಾಡಿ ಎಲ್ಲಾ ಸಮುದಾಯಗಳ ಮೇಲೆ ಯುಸಿಸಿ ಜಾರಿ ಮಾಡಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಯುಸಿಸಿ ಬಗ್ಗೆ ಗಂಭೀರವಾಗಿದ್ದರೆ, ಮೊದಲು ಕರಡು ಕಾನೂನನ್ನು ಹೊರತಂದು, ಅದರ ಬಗ್ಗೆ ಜನರಿಗೆ ಮಾಹಿತಿ ನೀಡಿಬೇಕು ಮತ್ತು ಸಲಹೆಗಳನ್ನು ಕೇಳಬೇಕು. ಪ್ರಶ್ನಾವಳಿಯನ್ನು ಹಂಚುವ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದರು.
ಮೊದಲು ಯುಸಿಸಿ ಕರಡು ಸಿದ್ಧಪಡಿಸಿದರೆ ಅದರಕ್ಕೆ ಬಗ್ಗೆ ಸಾಮಾನ್ಯ ಜನರು ಸಲಹೆಗಳನ್ನು ನೀಡಬಹುದು ಅಥವಾ ಮಸೂದೆ ತಮ್ಮ ಸಂಪ್ರದಾಯಗಳನ್ನು ರಕ್ಷಿಸಿದರೆ ಅದನ್ನು ಒಪ್ಪಬಹುದು ಅಥವಾ ಅವರ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದರೆ ಅದನ್ನು ವಿರೋಧಿಸಬಹುದು ಎಂದು ಡಿಸೋಜಾ ತಿಳಿಸಿದ್ದಾರೆ.