Home Uncategorized ರಜಾದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆ ನೌಕರರು, ಏಪ್ರಿಲ್ ಮಧ್ಯ ವೇಳೆಗೆ 20 ಲಕ್ಷ ಚುನಾವಣಾ...

ರಜಾದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆ ನೌಕರರು, ಏಪ್ರಿಲ್ ಮಧ್ಯ ವೇಳೆಗೆ 20 ಲಕ್ಷ ಚುನಾವಣಾ ಗುರುತು ಪತ್ರ ವಿತರಿಸುವ ಗುರಿ

27
0

ರಾಜ್ಯ ಚುನಾವಣಾ ಆಯೋಗದ ಪರವಾಗಿ ಅಂಚೆ ಕಚೇರಿ ಮೂಲಕ ನಿತ್ಯವೂ ಸಾವಿರಾರು ಚುನಾವಣಾ ಗುರುತು ಪತ್ರ(EPIC)ಗಳನ್ನು ಕಳುಹಿಸುತ್ತಿರುವುದರಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಇರುವುದರಿಂದ ಕರ್ನಾಟಕ ಅಂಚೆ ಇಲಾಖೆ ನೌಕರರು ಈಗ ಸರ್ಕಾರಿ ರಜಾ ದಿನಗಳಲ್ಲಿ ಮತ್ತು ಭಾನುವಾರಗಳಂದು ಸಹ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು: ರಾಜ್ಯ ಚುನಾವಣಾ ಆಯೋಗದ ಪರವಾಗಿ ಅಂಚೆ ಕಚೇರಿ ಮೂಲಕ ನಿತ್ಯವೂ ಸಾವಿರಾರು ಚುನಾವಣಾ ಗುರುತು ಪತ್ರ(EPIC)ಗಳನ್ನು ಕಳುಹಿಸುತ್ತಿರುವುದರಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಬೆರಳೆಣಿಕೆಯ ದಿನಗಳು ಇರುವುದರಿಂದ ಕರ್ನಾಟಕ ಅಂಚೆ ಇಲಾಖೆ ನೌಕರರು ಈಗ ಸರ್ಕಾರಿ ರಜಾ ದಿನಗಳಲ್ಲಿ ಮತ್ತು ಭಾನುವಾರಗಳಂದು ಸಹ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ ಅಂಚೆ ಇಲಾಖೆ ಮೂಲಕ ರಾಜ್ಯದ 5 ಲಕ್ಷ ಮತದಾರರಿಗೆ ಚುನಾವಣಾ ಗುರುತು ಪತ್ರ ವಿತರಿಸಲಾಗಿದೆ. ಏಪ್ರಿಲ್ ಮಧ್ಯಭಾಗದ ವೇಳೆಗೆ 20 ಲಕ್ಷದವರೆಗೆ ವಿತರಿಸುವ ನಿರೀಕ್ಷೆಯಿದೆ. ಚುನಾವಣಾ ಆಯೋಗದ ಆದೇಶದಂತೆ ಅಂಚೆ ಕಚೇರಿ ಮೂಲಕ ವಿತರಣೆಯಾಗುವ ವಸ್ತುಗಳ ಮೇಲೆ ಚುನಾವಣೆ ದೃಷ್ಟಿಯಿಂದ ತೀವ್ರ ನಿಗಾ ಇರಿಸಬೇಕಾಗಿದೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ (CPMG) ಎಸ್ ರಾಜೇಂದ್ರ ಕುಮಾರ್, ಸುರಕ್ಷತೆ ಕ್ರಮವಾಗಿ ಈಗ ನಾವು ರಾಜ್ಯದ 68 ಕೇಂದ್ರಗಳಲ್ಲಿ ಮಾತ್ರ ಚುನಾವಣಾ ಗುರುತು ಪತ್ರದ ಬುಕ್ಕಿಂಗ್ ನ್ನು ಸ್ವೀಕರಿಸುತ್ತಿದ್ದೇವೆ. ಆದರೆ ಕಾರ್ಡುಗಳ ವಿತರಣೆಯನ್ನು 9,613 ಅಂಚೆ ಕಚೇರಿಗಳಲ್ಲಿ ಮಾಡಲಾಗುತ್ತದೆ. ಅವುಗಳನ್ನು ಸ್ಪೀಡ್ ಪೋಸ್ಟ್  ಮತ್ತು ನಿಗದಿತ ವಿಳಾಸವಿದ್ದರೆ ಮಾತ್ರ ವಿತರಿಸಲಾಗುತ್ತದೆ. ಇನ್ನು ಕೆಲವು ಸ್ಥಳಗಳಲ್ಲಿ ಪಿಕ್ ಅಪ್ ಮತ್ತು ಡ್ರಾಪ್ ಸರ್ವಿಸ್ ನ್ನು ನಡೆಸಲಾಗಿದೆ ಎಂದರು.

ಕಳೆದ ವರ್ಷ ಜುಲೈ 25ಕ್ಕೆ ಮಾಡಿಕೊಂಡ ಒಪ್ಪಂದ ಪ್ರಕಾರ ಚುನಾವಣಾ ಗುರುತು ಪತ್ರಗಳನ್ನು ಅಂಚೆ ಕಚೇರಿ ಮೂಲಕ ವಿತರಿಸಲಾಗುತ್ತಿದೆ. 5 ವರ್ಷಗಳವರೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದದ ಅಡಿಯಲ್ಲಿ ಎಲ್ಲಾ ವಸ್ತುಗಳ ಟ್ರ್ಯಾಕಿಂಗ್ ಮತ್ತು ಪತ್ತೆಹಚ್ಚುವಿಕೆ ಮಾಡಲಾಗುತ್ತದೆ. ಬೆಂಗಳೂರು ಜಿಪಿಒ ಈ ಎಲ್ಲಾ ವಿಷಯಗಳಿಗೆ ನೋಡಲ್ ಕಚೇರಿಯಾಗಿದ್ದು 73 ಚುನಾವಣಾಧಿಕಾರಿಗಳನ್ನು ಗುರುತು ಪತ್ರಗಳನ್ನು ಪಿಕ್ ಅಪ್ ಮತ್ತು ಬುಕ್ಕಿಂಗ್ ಮಾಡಲು ಗುರುತಿಸಲಾಗಿದೆ.

LEAVE A REPLY

Please enter your comment!
Please enter your name here