ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಲಿಪ್ ಲಾಕ್ ವಿಚಾರವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಆಲಿಯಾ ಪತಿ, ರಣ್‌ಬೀರ್ ಕಪೂರ್ ಜೊತೆ ‘ಪುಷ್ಪ’ (Pushpa) ನಟಿ ಲಿಪ್ ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ ಆಗುತ್ತಿದೆ.
‘ಅನಿಮಲ್’ (Animal) ಸಿನಿಮಾದಲ್ಲಿ ರಣ್‌ಬೀರ್‌ಗೆ ರಶ್ಮಿಕಾ ಜೊತೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಟ್ರೈಲರ್ ಮೂಲಕ ‘ಅನಿಮಲ್’ ಚಿತ್ರದ ತುಣುಕು ಗಮನ ಸೆಳೆದಿತ್ತು. ಈಗ ಚಿತ್ರದ ಪೋಸ್ಟರ್‌ನಲ್ಲಿ ಹಸಿ ಬಿಸಿ ದೃಶ್ಯದ ಫೋಟೋ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ
ರಶ್ಮಿಕಾಗೆ ಲಿಪ್ ಲಾಕ್ ದೃಶ್ಯದಲ್ಲಿ ನಟಿಸೋದು ಹೊಸದೇನಲ್ಲ. ಈ ಹಿಂದೆ ‘ಗೀತಾ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿ ವಿಜಯ್ ದೇವರಕೊಂಡ (Vijay Devarakonda) ಜೊತೆ ನಟಿ ಬೋಲ್ಡ್ ಆಗಿಯೇ ಲಿಪ್ ಲಾಕ್ ಮಾಡಿದ್ದರು. ಈಗ ರಣ್‌ಬೀರ್ ಜೊತೆ ಚುಂಬನದ ದೃಶ್ಯದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
The post ರಣ್‌ಬೀರ್ ಕಪೂರ್ ಜೊತೆ ‘ಪುಷ್ಪʼ ಬೆಡಗಿ ಲಿಪ್ ಲಾಕ್: ರೊಮ್ಯಾಂಟಿಕ್ ಫೋಟೋ ಸಖತ್ ವೈರಲ್ appeared first on Ain Live News.