Home Uncategorized ರಾಜಧಾನಿಯ 3 ಕ್ಷೇತ್ರಗಳಲ್ಲಿ ಬಿಜೆಪಿಗೆ 'ಎಸ್ ಜಿಂಕ್ಸ್': ಶಾಂತಿ, ಶಿವಾಜಿ, ಸರ್ವಜ್ಞನಗರದಲ್ಲಿ ಬಹುತೇಕ ಕಾಂಗ್ರೆಸ್ ಫಿಕ್ಸ್!

ರಾಜಧಾನಿಯ 3 ಕ್ಷೇತ್ರಗಳಲ್ಲಿ ಬಿಜೆಪಿಗೆ 'ಎಸ್ ಜಿಂಕ್ಸ್': ಶಾಂತಿ, ಶಿವಾಜಿ, ಸರ್ವಜ್ಞನಗರದಲ್ಲಿ ಬಹುತೇಕ ಕಾಂಗ್ರೆಸ್ ಫಿಕ್ಸ್!

43
0

ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಗೆ ‘ಎಸ್’ ಜಿಂಕ್ಸ್ ಎಂದು ಕರೆಯಬಹುದು, ಏಕೆಂದರೆ ಶಾಂತಿನಗರ, ಶಿವಾಜಿನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಈ ಕ್ಷೇತಗಳಲ್ಲಿ ಅಮಿತ್ ಶಾ ಅವರ ತಂತ್ರ, ಮೋದಿ ಮ್ಯಾಜಿಕ್ ಕೆಲಸ ಮಾಡಿಲ್ಲ. ಬೆಂಗಳೂರು:  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿಗೆ ‘ಎಸ್’ ಜಿಂಕ್ಸ್ ಎಂದು ಕರೆಯಬಹುದು, ಏಕೆಂದರೆ  ಶಾಂತಿನಗರ, ಶಿವಾಜಿನಗರ ಮತ್ತು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಈ ಕ್ಷೇತ್ರದಳಲ್ಲಿ ಅಮಿತ್ ಶಾ ಅವರ ತಂತ್ರ, ಮೋದಿ ಮ್ಯಾಜಿಕ್ ಕೆಲಸ ಮಾಡಿಲ್ಲ.

ವಾಸ್ತವವಾಗಿ, 2018 ರಲ್ಲಿ, ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಮೂರು ಟ್ರಿಕಿ ಕ್ಷೇತ್ರಗಳನ್ನು ಒಳಗೊಂಡ ಮೆಗಾ ರೋಡ್‌ಶೋನಲ್ಲಿ ಭಾಗವಹಿಸಿದ್ದರು, ಆದರೆ ಬಿಜೆಪಿ ಯಾವುದೇ ಲಾಭವಾಗಲಿಲ್ಲ

ಹಲವು ವರ್ಷಗಳಿಂದ ಕಾಂಗ್ರೆಸ್ ಈ ಕ್ಷೇತ್ರಗಳನ್ನು ಗೆಲ್ಲುತ್ತಿದ್ದು, ಕ್ರಮವಾಗಿ ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್ ಮತ್ತು ಕೆಜೆ ಜಾರ್ಜ್ ಪ್ರತಿನಿಧಿಸುತ್ತಿದ್ದಾರೆ. ಇವರ ವಿರುದ್ಧ ಬಿಜೆಪಿ ಮಾಜಿ ಬಿಬಿಎಂಪಿ ಕೌನ್ಸಿಲರ್‌ಗಳಾದ ಎನ್.ಚಂದ್ರು, ಶಿವಕುಮಾರ್ ಮತ್ತು ಪದ್ಮನಾಭ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಕುತೂಹಲಕಾರಿಯಾಗಿ, ಲೋಕಸಭೆ ಚುನಾವಣೆಯ ಸಮಯದಲ್ಲಿ ಈ ಕ್ಷೇತ್ರಗಳು ಬಿಜೆಪಿಗೆ ಮತ ನೀಡುತ್ತವೆ.

ಇದನ್ನೂ ಓದಿ: ಚುನಾವಣಾ ಗುರುತು ಚೀಟಿಯಿಂದ ಹೆಸರು ಅಳಿಸಿದ ಆರೋಪ: ಆಕ್ಷೇಪಣೆಗೆ ನಿಗದಿತ ಸ್ಥಳಗಳಲ್ಲಿ ವಾರದವರೆಗೆ ಅಧಿಕಾರಿಗಳು ಲಭ್ಯ

2018 ರಲ್ಲಿ, ರೋಷನ್ ಬೇಗ್ ಶಿವಾಜಿನಗರವನ್ನು 59,742 ಮತಗಳೊಂದಿಗೆ (ಶೇ. 55 ಮತ ಹಂಚಿಕೆ) ಗೆದ್ದರೆ, ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಶೇಕಡಾ 41.2 ರಷ್ಟು ಮತಗಳನ್ನು ಪಡೆದರು. 2013ರಲ್ಲೂ ಇದೇ ರೀತಿಯ ಮತಗಳಿಕೆಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಶೇ.54.62 ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿಗೆ ಶೇ.32ರಷ್ಟು ಮತ ಲಭಿಸಿತ್ತು. ಶಿವಾಜಿನಗರದಲ್ಲಿ 70,000ಕ್ಕೂ ಹೆಚ್ಚು ಮುಸ್ಲಿಂ ಮತದಾರರು ಕಾಂಗ್ರೆಸ್‌ಗೆ ಮತ ಹಾಕಿದರೆ, ಕೆಲವರು ತಟಸ್ಥರಾಗಿದ್ದಾರೆ.

ತಮಿಳು ಮತದಾರರು ಗಣನೀಯವಾಗಿ ದೊಡ್ಡ ಸಂಖ್ಯೆಯಲ್ಲಿದ್ದು, ಅವರೂ ಬಿಜೆಪಿ ಪರವಾಗಿಲ್ಲ. ಶಿವಾಜಿನಗರ ಕ್ಷೇತ್ರದಲ್ಲಿ 1967 ರಿಂದ ನಡೆದ ಒಂದು ಉಪಚುನಾವಣೆ ಸೇರಿದಂತೆ 13 ಚುನಾವಣೆಗಳಲ್ಲಿ ಬಿಜೆಪಿ ಎರಡು ಬಾರಿ, 1999 ಮತ್ತು 2004 ರಲ್ಲಿ ಜೆಡಿಎಸ್ ಎರಡು ಬಾರಿ ಗೆದ್ದು, ಉಳಿದ ಒಂಬತ್ತು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

ಶಾಂತಿನಗರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಹ್ಯಾರೀಸ್ 2018ರಲ್ಲಿ ಶೇ.50ರ ಸಮೀಪದಲ್ಲಿ ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ವಾಸುದೇವಮೂರ್ತಿ ಶೇ.34ರಷ್ಟು ಮತಗಳನ್ನು ಪಡೆದಿದ್ದಾರೆ. 2013ರಲ್ಲಿ ಕಾಂಗ್ರೆಸ್ ಶೇ.52 ಹಾಗೂ ಬಿಜೆಪಿ ಅಭ್ಯರ್ಥಿ ಶೇ.10ರಷ್ಟು ಮತ ಪಡೆದಿದ್ದರು. ಈ ಭಾಗದಲ್ಲಿ ತಮಿಳಿಗರನ್ನು ಹೊರತುಪಡಿಸಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದಾರರಿದ್ದಾರೆ, ಅವರ ಮತದಾನದ ಮಾದರಿಯು ಕಾಂಗ್ರೆಸ್‌ನತ್ತ ಮುಖ ಮಾಡಿದೆ. ಈ ಕ್ಷೇತ್ರವೂ 12 ವಿಧಾನಸಭಾ ಚುನಾವಣೆಗಳನ್ನು ಕಂಡಿದ್ದು, ಅದರಲ್ಲಿ ಕಾಂಗ್ರೆಸ್ 9, ಬಿಜೆಪಿ 1, ಜನತಾ ಪಕ್ಷ 2 ಮತ್ತು ಜೆಡಿಎಸ್ ಒಂದು ಬಾರಿ ಗೆದ್ದಿದೆ.

ಇದನ್ನೂ ಓದಿ:  ಮುಸ್ಲಿಮರೇ ಅಧಿಕವಾಗಿರುವ ಶಿವಾಜಿನಗರದಲ್ಲಿ ‘ತಮಿಳು’ ಮತಗಳೇ ನಿರ್ಣಾಯಕ: ರಿಜ್ವಾನ್ ಅರ್ಷದ್ ಸೋಲಿಸಲು ‘ಬೇಗ್’ ಹಿಮ್ಮೇಳ!

ಸರ್ವಜ್ಞನಗರದ ಕಥೆಯೂ ಇದೇ ಆಗಿದ್ದು, ಕಾಂಗ್ರೆಸ್ ಶಾಸಕ ಜಾರ್ಜ್ 1 ಲಕ್ಷಕ್ಕೂ ಅಧಿಕ ಮತಗಳನ್ನು (ಸುಮಾರು ಶೇ. 62ರಷ್ಟು ಮತ) ಪಡೆದರೆ, ಬಿಜೆಪಿ ಅಭ್ಯರ್ಥಿ ಕೇವಲ ಶೇ.31ರಷ್ಟು ಮತ ಪಡೆದಿದ್ದಾರೆ. 2008 ರಲ್ಲಿ ರಚನೆಯಾದ ಕ್ಷೇತ್ರವು ನಾಲ್ಕು ಚುನಾವಣೆಗಳನ್ನು ಕಂಡಿದೆ ಮತ್ತು ಎಲ್ಲವನ್ನೂ ಕಾಂಗ್ರೆಸ್ ಗೆದ್ದಿದೆ.

ಶಿವಾಜಿನಗರ ಮತ್ತು ಶಾಂತಿನಗರ ಕೇಂದ್ರ ವ್ಯಾಪಾರ ಭಾಗವಾಗಿದ್ದರೆ, ಸರ್ವಜ್ಞನಗರವು ಕೆಲವು ಐಟಿ ಕಂಪನಿಗಳನ್ನು ಹೊಂದಿದೆ. ಬೆಂಗಳೂರಿನ ಇತರ ಭಾಗಗಳಿಂದ ಇಲ್ಲಿಗೆ ಕೆಲಸ ಮಾಡಲು ಬರುವ ಜನರು ಸಾಮಾನ್ಯವಾಗಿ ರಸ್ತೆ ಮೂಲಸೌಕರ್ಯಗಳ ಬಗ್ಗೆ ದೂರುತ್ತಾರೆ. ಹೊಂಡಗಳು ಮತ್ತು ಟ್ರಾಫಿಕ್ ಜಾಮ್ ಸಾಮಾನ್ಯ. 

ಇದನ್ನೂ ಓದಿ: ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಫರ್ ಅಲಿ ನಾಮಪತ್ರ ತಿರಸ್ಕೃತ

ಎರಡು ಕ್ಷೇತ್ರಗಳಲ್ಲೂ ಸ್ಲಂ ಗಳಿದ್ದು, ಹಲವು ವರ್ಷಗಳಿಂದ ಸಮಸ್ಯೆ ಪರಿಹರಿಸಲಾಗಿಲ್ಲ. ಇದು ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ದಕ್ಷಿಣಕ್ಕೆ ಬೆಂಗಳೂರು ಪೂರ್ವಕ್ಕೆ ಸಂಪರ್ಕ ಕಲ್ಪಿಸುತ್ತವೆ. ಇತ್ತೀಚಿನ ಮತದಾರರ ಪಟ್ಟಿಯ ಪ್ರಕಾರ, ಶಿವಾಜಿನಗರದಲ್ಲಿ 1.94 ಲಕ್ಷ ಅರ್ಹ ಮತದಾರರು, ಶಾಂತಿನಗರದಲ್ಲಿ 2.22 ಲಕ್ಷ ಮತದಾರರು ಮತ್ತು ಸರ್ವಜ್ಞನಗರದಲ್ಲಿ 3.66 ಲಕ್ಷ ಮತದಾರರಿದ್ದಾರೆ.

LEAVE A REPLY

Please enter your comment!
Please enter your name here