ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ 3.02 ರೂ. ಹಾಗೂ ಡೀಸೆಲ್‌ಗೆ 3 ರೂ. ಹೆಚ್ಚಳ ಆಗಿದೆ.
ಪೆಟ್ರೋಲ್ ಹಳೆಯ ದರ 99.83 ರೂ. ಇದ್ದು, ಪರಿಷ್ಕೃತ ದರ 102.85 ರೂ. ಆಗಿದೆ. ಹಾಗೆಯೇ ಡೀಸೆಲ್ ಹಳೆಯ ದರ 85.9 ರೂ. ಇದ್ದು, ಪರಿಷ್ಕೃತ ದರ 88.93 ರೂ. ಆಗಿದೆ.
ಈ ಹಿಂದೆ ಲೋಕಸಭಾ ಚುನಾವಣೆಗೆಗೂ ಮುನ್ನ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ದರ ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿತ್ತು.