ಬೆಂಗಳೂರು: ಚುನಾವಣಾ ಆಯೋಗವು ರಾಜ್ಯದಲ್ಲಿನ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಒಟ್ಟು 17,937 ಮಂದಿ ಶತಾಯುಷಿ ಮತದಾರರಿದ್ದಾರೆ ಎಂದು ತಿಳಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯಂತೆ ಕರ್ನಾಟಕದಲ್ಲಿಒಟ್ಟು 5,37,85,815 ಮತದಾರರಿದ್ದಾರೆ. ಈ ಪೈಕಿ 2,69,33,750 ಪುರುಷ ಹಾಗೂ 2,68,47,145 ಮಹಿಳಾ ಮತದಾರರಿದ್ದಾರೆ ಎಂದು ಆಯೋಗವು ತಿಳಿಸಿದೆ.
ರಾಜ್ಯದಲ್ಲಿ ಒಟ್ಟು 4,920 ಲಿಂಗತ್ವ ಅಲ್ಪಸಂಖ್ಯಾತರು, 5,62,890 ವಿಶೇಷಚೇತನರು, 18ರಿಂದ 19 ವರ್ಷ ವಯೋಮಿತಿಯೊಳಗಿನ 10,34,018 ಮಂದಿ, 20ರಿಂದ 29 ವಯೋಮಿತಿಯೊಳಗಿನ ಒಟ್ಟು 98,70,595 ಹಾಗೂ 80 ವರ್ಷಕ್ಕೂ ಹೆಚ್ಚು ವಯೋಮಿತಿಯೊಳಗಿನ 12,71,862 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದೆ.