Home Uncategorized ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ 92 ವರ್ಷದ ಮಾದಮ್ಮ ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿ!

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ 92 ವರ್ಷದ ಮಾದಮ್ಮ ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿ!

27
0

ಸೂಲಗಿತ್ತಿ ಹಾಗೂ ಬುಡಕಟ್ಟು ವೈದ್ಯ ಪದ್ಧತಿಗೆ ಉತ್ತೇಜನ ನೀಡಿದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ತೊಂಬತ್ತೆರಡು ವರ್ಷದ ಮಾದಮ್ಮ ಅವರು ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಮೈಸೂರು: ಸೂಲಗಿತ್ತಿ ಹಾಗೂ ಬುಡಕಟ್ಟು ವೈದ್ಯ ಪದ್ಧತಿಗೆ ಉತ್ತೇಜನ ನೀಡಿದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ತೊಂಬತ್ತೆರಡು ವರ್ಷದ ಮಾದಮ್ಮ ಅವರು ಚಾಮರಾಜನಗರ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಸೋಲಿಗ ಬುಡಕಟ್ಟು ಸಮುದಾಯದ ಮಾದಮ್ಮ ಅವರು ಇತ್ತೀಚೆಗೆ ಹನೂರು ತಾಲೂಕಿನ ಜೀರಿಗೆ ದೊಡ್ಡಿ ಗ್ರಾಮಕ್ಕೆ ವಿದ್ಯುತ್ ಪೂರೈಕೆಗಾಗಿ ಹೋರಾಟ ನಡೆಸಿ ಸುದ್ದಿಯಾಗಿದ್ದರು. ವಸತಿ ಸಚಿವ ವಿ. ಸೋಮಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವರ ಗ್ರಾಮಕ್ಕೆ ವಿದ್ಯುತ್ ಪೂರೈಕೆಯಾಗಿದೆ. 

ಜಿಲ್ಲಾಡಳಿತವು ಅವರನ್ನು ಚುನಾವಣಾ ರಾಯಭಾರಿಯನ್ನಾಗಿ ಮಾಡುವುದರೊಂದಿಗೆ, ಶಾಲಾ ಶಿಕ್ಷಕಿ ಮತ್ತು ಪಂಚಾಯತ್ ಅಧಿಕಾರಿಗಳು ಮಾದಮ್ಮ ಅವರಿಗೆ ನಾಲ್ಕು ಗಂಟೆಗಳ ಕಾಲ ತರಬೇತಿ ನೀಡಿದರು.  ನಂತರ ‘ಮತದಾನ ನಮ್ಮ ಹಕ್ಕು, ದೇಶದ ಹಿತದೃಷ್ಟಿಯಿಂದ ಮತದಾನ ಒಳ್ಳೆಯದು’ ಎಂಬ ಆಕೆಯ ಮನವಿಯನ್ನು ದಾಖಲಿಸಿಕೊಂಡರು.

ತಾವು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನಂತರ ಅನೇಕ ಜನರು ತಮ್ಮ ದೂರದ ಗ್ರಾಮಕ್ಕೆ ಭೇಟಿ ನೀಡಿ ಗೌರವಿಸಿದರು. ರಾಜ್ಯ ಸರ್ಕಾರವು ತಮ್ಮ ವೃದ್ಧಾಪ್ಯ ವೇತನವನ್ನು ಹೆಚ್ಚಿಸಬೇಕು. ಇದರಿಂದಾಗಿ ಮಕ್ಕಳು ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಅವರ ದೈನಂದಿನ ಅಗತ್ಯಗಳನ್ನು ಪೂರೈಸಬಹುದು ಎಂದು ಮಾದಮ್ಮ ಹೇಳುತ್ತಾರೆ.

ಜೀರಿಗೆ ದೊಡ್ಡಿ ಗ್ರಾಮಕ್ಕೆ ಹೆಚ್ಚುವರಿ ವಿದ್ಯುತ್ ಕಂಬಗಳನ್ನು ನಿರ್ಮಿಸಿ ವಿದ್ಯುತ್ ಸಂಪರ್ಕ ನೀಡಲು ಸೆಸ್ಕಾಂ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

LEAVE A REPLY

Please enter your comment!
Please enter your name here