Home ಕರ್ನಾಟಕ ರಾಮನಗರ | ಹಣಕ್ಕಾಗಿ ತಂದೆ–ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ

ರಾಮನಗರ | ಹಣಕ್ಕಾಗಿ ತಂದೆ–ಮಗನ ನಡುವೆ ಜಗಳ : ಕೊಲೆಯಲ್ಲಿ ಅಂತ್ಯ

29
0

ರಾಮನಗರ : ಹಣಕ್ಕಾಗಿ ತಂದೆ–ಮಗನ ನಡುವೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿ ತಂದೆಯೊಬ್ಬ ತನ್ನ ಮಗನನ್ನೇ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಲಕ್ಕೋಜನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.

ಹತ್ಯೆಯಾದ ವ್ಯಕ್ತಿಯನ್ನು ಭಾಸ್ಕರ್ (31) ಎಂದು ಗುರುತಿಸಲಾಗಿದ್ದು, ಮಗನನ್ನೇ ಕೊಂದ ತಂದೆ ಕೃಷ್ಣಪ್ಪನನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ.

ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿ ಕೃಷ್ಣಪ್ಪನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here