Home ಕರ್ನಾಟಕ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು ಸೇರಿ ವಿವಿಧೆಡೆ ಎನ್‍ಐಎ ಶೋಧ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರು ಸೇರಿ ವಿವಿಧೆಡೆ ಎನ್‍ಐಎ ಶೋಧ

11
0

ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಪ್ರಕರಣದ ಶಂಕಿತ ಆರೋಪಿಯ ಕುರಿತು ಮಹತ್ವದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‍ಐಎ) ಅಧಿಕಾರಿಗಳ ತಂಡ ಮಾ.27ರ ಬುಧವಾರ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಹಾಗು ಚೆನ್ನೈನಲ್ಲಿ ದಾಳಿ ನಡೆಸಿ, ಮಾಹಿತಿ ಕಲೆ ಹಾಕುತ್ತಿರುವುದಾಗಿ ವರದಿಯಾಗಿದೆ.

ಬೆಂಗಳೂರು ಹಾಗೂ ಮುಂಬೈನಿಂದ 5 ವಾಹನಗಳಲ್ಲಿ ಸುಮಾರು 15 ಎನ್‍ಐಎ ಅಧಿಕಾರಿಗಳ ತಂಡ ಬೆಂಗಳೂರಿನ 5 ಕಡೆಗಳಲ್ಲಿ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದೆ. ಬಳಿಕ ಶಿವಮೊಗ್ಗದ ತೀರ್ಥಹಳ್ಳಿಗೆ ತೆರಳಿದ್ದು, ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಬೆಟ್ಟಮಕ್ಕಿ ಹಾಗೂ ಇಂದಿರಾ ನಗರದ ಐದು ಕಡೆಗಳಲ್ಲಿ ಪರಿಶೀಲನೆ ನಡೆಸಿದೆ ಎಂದು ತಿಳಿದುಬಂದಿದೆ.

ಕೆಫೆ ಸ್ಪೋಟದ ಶಂಕಿತನನ್ನು ತೀರ್ಥಹಳ್ಳಿ ಮೂಲದವನೆಂದು ಹೇಳಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ತೀರ್ಥಹಳ್ಳಿಯಿಂದ ಈತ ನಾಪತ್ತೆಯಾಗಿದ್ದನು. ಹೀಗಾಗಿ ತನಿಖಾಧಿಕಾರಿಗಳ ತಂಡ ಆತನ ಮನೆ ಸೇರಿದಂತೆ ಇತರೆ ಕಡೆ ದಾಳಿ ಕೈಗೊಂಡಿರುವುದಾಗಿ ಗೊತ್ತಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಎನ್‍ಐಎ ಚೆನ್ನೈನಲ್ಲೂ ದಾಳಿ ಕೈಗೊಂಡಿದೆ. ಚೆನ್ನೈನ ಮೂರು ಮತ್ತು ರಾಮನಾಥಪುರಂ ಜಿಲ್ಲೆಯ ಎರಡು ಕಡೆ ಸೇರಿದಂತೆ ಐದು ಸ್ಥಳಗಳಲ್ಲಿ ತನಿಖೆ ನಡೆಸಲಾಗಿದೆ. ಶಂಕಿತ ಆರೋಪಿ ಚೆನ್ನೈನ ಲಾಡ್ಜ್‍ವೊಂದರಲ್ಲಿ ತಂಗಿರುವ ಮಾಹಿತಿ ಲಭ್ಯವಾದ ಕಾರಣ ಈ ದಾಳಿ ನಡೆದಿದೆ ಎಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here