ಆಘಾತಕಾರಿ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಕೊಂದು, ಮೃತದೇಹವನ್ನು ಗೋಣಿ ಚೀಲದಲ್ಲಿ ಇರಿಸಿ ಹೆದ್ದಾರಿಯೊಂದರ ಬಳಿ ಹೂತ್ತಿಟ್ಟದ ಘಟನೆ ರಾಯಚೂರು ಬಳಿ ನಡೆದಿದೆ. ವಡ್ಲೂರು ನಿವಾಸಿ ಎಪ್ಪತ್ತು ವರ್ಷದ ಶಿವನಪ್ಪ ಅವರನ್ನು 35 ವರ್ಷದ ಮಗ ಈರಣ್ಣ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು: ಆಘಾತಕಾರಿ ಘಟನೆಯೊಂದರಲ್ಲಿ ಯುವಕನೊಬ್ಬ ತನ್ನ ತಂದೆಯನ್ನು ಕೊಂದು, ಮೃತದೇಹವನ್ನು ಗೋಣಿ ಚೀಲದಲ್ಲಿ ಇರಿಸಿ ಹೆದ್ದಾರಿಯೊಂದರ ಬಳಿ ಹೂತ್ತಿಟ್ಟದ ಘಟನೆ ರಾಯಚೂರು ಬಳಿ ನಡೆದಿದೆ. ವಡ್ಲೂರು ನಿವಾಸಿ ಎಪ್ಪತ್ತು ವರ್ಷದ ಶಿವನಪ್ಪ ಅವರನ್ನು 35 ವರ್ಷದ ಮಗ ಈರಣ್ಣ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಜಮೀನು ಸರ್ಕಾರ ಜಮೀನು ಸ್ವಾಧೀನಪಡಿಸಿಕೊಂಡ ಕಾರಣ ಪರಿಹಾರದ ಹಣ ಬಂದಿತ್ತು. ಆ ಹಣಕ್ಕಾಗಿ ಹಲವು ಬಾರಿ ಹಂತಕ ಮಗ ಒತ್ತಾಯಿಸಿದ್ದ. ಆದರೆ, ಹಣ ಕೊಡಲು ಶಿವನಪ್ಪ ನಿರಾಕರಿಸಿದ್ದರು. ಜುಲೈ 7 ರಂದು ಹೀಗೆ ಜಗಳವಾಡುತ್ತಿದ್ದಾಗ ಆರೋಪಿ ಮಗ ತನ್ನ ತಂದೆಯ ಮೇಲೆ ಪೈಪ್‌ನಿಂದ ಹಲ್ಲೆ ನಡೆಸಿದ್ದ. ನಂತರ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದ ತಂದೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ, ತನ್ನ ಜಮೀನಿನ ಬಳಿ ತೆಗೆದುಕೊಂಡು ಹೋಗಿ ಹೆದ್ದಾರಿ ಪಕ್ಕದಲ್ಲಿ ಹೂತಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಆತ ಸಹಜ ರೀತಿಯಲ್ಲಿ ವರ್ತಿಸಿದ್ದು, ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ. ಆದರೆ ಕುಟುಂಬಸ್ಥರು ಘಟನೆಯಲ್ಲಿ ಆತನ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಪೊಲೀಸರು ಅನುಮಾನದ ಆಧಾರದ ಮೇಲೆ ಪದೇ ಪದೇ ಆತನನ್ನುವಿಚಾರಣೆ ನಡೆಸಿದ್ದಾರೆ. ಕೊನೆಗೆ ಆರೋಪಿ ಈರಣ್ಣ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ. ಗುರುವಾರ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಷಯದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.