Home Uncategorized ರಾಹುಲ್ ಗಾಂಧಿ ಸಲಹೆಯಂತೆ ರಾಜ್ಯದ ಜನರ ತೆರಿಗೆ ಹಣ ದುರುಪಯೋಗ: ವಿಜಯೇಂದ್ರ ಆರೋಪ

ರಾಹುಲ್ ಗಾಂಧಿ ಸಲಹೆಯಂತೆ ರಾಜ್ಯದ ಜನರ ತೆರಿಗೆ ಹಣ ದುರುಪಯೋಗ: ವಿಜಯೇಂದ್ರ ಆರೋಪ

20
0

ಬೆಂಗಳೂರು, ಫೆ.20: ಕರ್ನಾಟಕದ ಆನೆಯ ದಾಳಿಯಿಂದ ಕೇರಳದಲ್ಲಿ ವಯನಾಡು ಜಿಲ್ಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಮೇರೆಗೆ ಕರ್ನಾಟಕ ಸರ್ಕಾರ, ರಾಜ್ಯದ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ತಮ್ಮ ‘X’ ಖಾತೆಯಲ್ಲಿ ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿಯವರ ವಯನಾಡ್ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ರಾಜ್ಯ ಸರಕಾರ ತನ್ನ ಬೊಕ್ಕಸದಿಂದ 15 ಲಕ್ಷ ರೂ. ನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ರಾಜ್ಯದ ಜನರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಾದ್ಯಂತ ಬರಗಾಲ ಮತ್ತು ನೂರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ, ಸ್ವಲ್ಪವೂ ನಾಚಿಕೆಯಿಲ್ಲದೆ ರಾಜ್ಯದ ತುರ್ತು ಅಗತ್ಯಗಳತ್ತ ಗಮನಹರಿಸುವ ಬದಲು ರಾಹುಲ್ ಗಾಂಧಿಯವರನ್ನು ಸಂತೋಷಪಡಿಸಲು ಆದ್ಯತೆ ನೀಡುತ್ತಿರುವುದು ಖೇದಕರ. ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಕರ್ನಾಟಕದ ತೆರಿಗೆದಾರರ ಹಣವನ್ನು ಅನೈತಿಕವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವರುಗಳು ಹೊಣೆಹೊರಬೇಕು ಎಂದು ವಿಜಯೇಂದ್ರ ಟೀಕಿಸಿದ್ದಾರೆ.

The @INCKarnataka government’s outrageous misuse of Karnataka taxpayers’ funds to curry favor with Rahul Gandhi is utterly disgraceful.

Illegally allocating state fund of Rs.15 lakh to a deceased individual from @RahulGandhi‘s Wayanad constituency, falsely blaming a elephant… pic.twitter.com/gIFvA5hUSk

— Vijayendra Yediyurappa (@BYVijayendra) February 19, 2024

LEAVE A REPLY

Please enter your comment!
Please enter your name here