Home ಕರ್ನಾಟಕ ರಿಯಾಝ್ ಮೌಲವಿ ಹತ್ಯೆ: ಆರೋಪಿಗಳಾದ ಮೂವರು ಆರೆಸ್ಸೆಸ್‌ ಕಾರ್ಯಕರ್ತರನ್ನು ಖುಲಾಸೆಗೊಳಿಸಿದ ಕಾಸರಗೋಡು ನ್ಯಾಯಾಲಯ

ರಿಯಾಝ್ ಮೌಲವಿ ಹತ್ಯೆ: ಆರೋಪಿಗಳಾದ ಮೂವರು ಆರೆಸ್ಸೆಸ್‌ ಕಾರ್ಯಕರ್ತರನ್ನು ಖುಲಾಸೆಗೊಳಿಸಿದ ಕಾಸರಗೋಡು ನ್ಯಾಯಾಲಯ

18
0

ಕಾಸರಗೋಡು: ಕೇರಳದ ಕಾಸರಗೋಡಿನ ವಿಚಾರಣಾ ನ್ಯಾಯಾಲಯವು 2017 ರ ರಿಯಾಝ್ ಮೌಲವಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಮೂವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಕಾರ್ಯಕರ್ತರನ್ನು ಖುಲಾಸೆಗೊಳಿಸಿದೆ.

ಕರ್ನಾಟಕದ ಕೊಡಗು ಜಿಲ್ಲೆಯವರಾದ ಮಹಮ್ಮದ್ ರಿಯಾಝ್ ಮೌಲವಿ ಅವರು ಕಾಸರಗೋಡಿನ ಮದ್ರಸ ಒಂದರಲ್ಲಿ ಶಿಕ್ಷಕರಾಗಿ‌ ಕೆಲಸ ನಿರ್ವಹಿಸುತ್ತಿದ್ದರು. ಮಾರ್ಚ್ 20, 2017 ರಂದು ಮುಂಜಾನೆ ಮದ್ರಸ ಅಧ್ಯಾಪಕ ರಿಯಾಝ್ ಮೌಲವಿಯವರನ್ನು ಹಳೆ ಸೂರ್ಲುವಿನಲ್ಲಿರುವ ಅವರ ವಾಸಸ್ಥಳದಲ್ಲಿ ಕೊಚ್ಚಿ ಕೊಲೆಗೈಯ್ಯ ಲಾಗಿತ್ತು.

ಕೇಲುಗುಡ್ಡೆಯ ಆರೆಸ್ಸೆಸ್ ಕಾರ್ಯಕರ್ತರಾದ ಅಜೇಶ್ ಅಲಿಯಾಸ್ ಅಪ್ಪು, ನಿತಿನ್ ಕುಮಾರ್ ಮತ್ತು ಅಖಿಲೇಶ್ ಅಲಿಯಾಸ್ ಅಖಿಲ್ ನನ್ನು ಶನಿವಾರ ಜಿಲ್ಲಾ ನ್ಯಾಯಾಲಯವು ಖುಲಾಸೆಗೊಳಿಸಿದೆ.

LEAVE A REPLY

Please enter your comment!
Please enter your name here