ರಾಜ್ಯದ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳ ನಡುವಿನ ಕಲಹ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರ ಜಗಳ ಮುಂದೆ ಸಿನಿಮಾವಾಗಿ ತೆರೆ ಮೇಲೆ ಬರುವ ಸಾಧ್ಯತೆಯಿದೆ. ಬೆಂಗಳೂರು: ರಾಜ್ಯದ ಇಬ್ಬರು ಉನ್ನತ ಮಹಿಳಾ ಅಧಿಕಾರಿಗಳ ನಡುವಿನ ಕಲಹ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರ ಜಗಳ ಮುಂದೆ ಸಿನಿಮಾವಾಗಿ ತೆರೆ ಮೇಲೆ ಬರುವ ಸಾಧ್ಯತೆಯಿದೆ.
ಹಿರಿಯ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬಹಿರಂಗ ಘರ್ಷಣೆಯನ್ನು ಸಿನಿಮಾ ಮಾಡಲು ನಿರ್ದೇಶಕರು ಮತ್ತು ಚಿತ್ರ ನಿರ್ಮಾಪಕರು ಆಸಕ್ತಿ ತೋರಿಸುತ್ತಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಎರಡು ಸಿನಿಮಾ ಶೀರ್ಷಿಕೆಗಳನ್ನು ಪಡೆದುಕೊಂಡಿದೆ , ರೋಹಿಣಿ ಐಎಎಸ್ ಮತ್ತು ಆರ್ ವರ್ಸಸ್ ಆರ್, ಇವೆರಡೂ ಟೈಟಲ್ ಗಳು ಈ ಇಬ್ಬರು ಅಧಿಕಾರಿಗಳ ಸುತ್ತ ಸುತ್ತುತ್ತಿವೆ. ಕೆಎಫ್‌ಸಿಸಿ ಸಮಿತಿಯು ಮುಂದಿನ ವಾರ ಸಭೆ ಸೇರಿ ಕಥೆ ಕೇಳಿದ ನಂತರ ಅನುಮೋದನೆ ನೀಡುವ ನಿರೀಕ್ಷೆಯಿದೆ.
‘5 ಅಡಿ 7 ಅಂಗುಲ’ ಖ್ಯಾತಿಯ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ಆರ್ ವರ್ಸಸ್ ಆರ್ ಶೀರ್ಷಿಕೆಗೆ ಅರ್ಜಿ ಸಲ್ಲಿಸಿದ್ದು, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ರೋಹಿಣಿ ಐಎಎಸ್ ಆಯ್ಕೆ ಮಾಡಿದ್ದಾರೆ ಎಂದು ಕೆಫ್ ಸಿಸಿ ಅಧ್ಯಕ್ಷ ಬಾಮಾ ಹರೀಶ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಕಥೆಯ ಸಾರಾಂಶಶಗಳನ್ನು ಕೇಳಲಿದ್ದು, ಸಿನಿಮಾ ಕಥೆಯು ಜೀವನಚರಿತ್ರೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಿದ್ದರೆ, ಶೀರ್ಷಿಕೆಗಳನ್ನು ಅನುಮೋದಿಸುವ ಮೊದಲು ಅವರು ಸಂಬಂಧಪಟ್ಟವರಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುತ್ತಾರೆ.
ಇಂತಹ ವಿವಾದಗಳು ಅಥವಾ ಸ್ವಾರಸ್ಯಕರ ಘಟನೆಗಳು ನಡೆದಾಗಲೆಲ್ಲ ನಿರ್ಮಾಪಕರು ಮತ್ತು ನಿರ್ದೇಶಕರು ಸಿನಿಮಾ ಮಾಡಲು ಮುಂದಾಗುತ್ತಾರೆ ಎಂದು ಅವರು ಹೇಳಿದ್ದಾರೆ. ಕೆಲವರು ಬೆಳ್ಳಿತೆರೆಗೆ ಬರುತ್ತಾರೆ, ಆದರೆ ಹಲವರು ಬರುವುದಿಲ್ಲ. ರೋಹಿಣಿ ಸಿಂಧೂರಿ ಮೇಲೆ ಸಿನಿಮಾ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ.
ಎರಡು ವರ್ಷಗಳ ಹಿಂದೆ ಮಂಡ್ಯ ಮೂಲದ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ರೋಹಿಣಿ ಅವರ ಜೀವನ ಕಥೆ ಆಧರಿತ ಭಾರತ ಸಿಂಧೂರಿ ಸಿನಿಮಾ ಮಾಡಲು ಪ್ರಕ್ರಿಯೆ ಆರಂಭಿಸಿತ್ತು, ಆದರೆ ಯೋಜನೆಯು ಹೆಚ್ಚು ಪ್ರಗತಿ ಸಾಧಿಸಲಿಲ್ಲ. ಅದಕ್ಕೂ ಮೊದಲು, ಐಎಎಸ್ ದಂಪತಿಗಳಾದ ಶಾಲಿನಿ ರಜನೀಶ್ ಮತ್ತು ರಜನೀಶ್ ಅವರ ಜೀವನದ ಮೇಲೆ ಶಾಲಿನಿ ಐಎಎಸ್ ಚಿತ್ರಕ್ಕಾಗಿ ಯೋಜಿಸಲಾಗಿತ್ತು, ಆದರೆ ಅದು ಕೂಡ ಸಾಧ್ಯವಾಗಿಲ್ಲ.