ಚೆನ್ನೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖವಾಣಿ ನಿಯತಕಾಲಿಕವಾದ ‘ವಿಜಯಭಾರತಂ’ನ ಮಾಜಿ ಸಂಪಾದಕ ಸುಂದರ ಜೋತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸೋಮವಾರ ಆರೆಸ್ಸೆಸ್ ಪ್ರಕಟಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೃಷ್ಟಿಮಾಂದ್ಯತೆ ಹಾಗೂ ಶ್ರವಣ ದೋಷ ಹೊಂದಿದ್ದ, ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತರಾಗಿದ್ದ 68 ವರ್ಷದ ಸುಂದರ ಜೋತಿ ಅವರಿಗೆ ಡಿಸೆಂಬರ್ 10ರಂದು ಸಂಜೆ ಚೆಟ್ಪೇಟ್ ರೈಲ್ವೆ ನಿಲ್ದಾಣದ ಬಳಿ ಎಕ್ಸ್ಪ್ರೆಸ್ ರೈಲೊಂದು ಢಿಕ್ಕಿ ಹೊಡೆದಿದೆ.
ನಾಲ್ಕು ದಶಕಗಳ ಕಾಲ ಆರೆಸ್ಸೆಸ್ ನಲ್ಲಿ ‘ಪ್ರಚಾರಕ’ರಾಗಿದ್ದ ಸುಂದರ ಜೋತಿ, ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.