ಉಡುಪಿ: ಮಡಗಾಂವ್ ಜಂಕ್ಷನ್- ಕುಮಟಾ ವಿಭಾಗದಲ್ಲಿ ಡಿ.21ರಂದು ಅಪರಾಹ್ನ 12:00ರಿಂದ 3:00ಗಂಟೆಯವರೆಗೆ ಮೂರು ಗಂಟೆಗಳ ಕಾಲ ರೈಲು ಹಳಿಗಳ ನಿರ್ವಹಣಾ ಕಾರ್ಯ ನಡೆಯಲಿರುವುದ ರಿಂದ ಕೆಲ ರೈಲು ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ಜಂಕ್ಷನ್ ನಡುವೆ ಡಿ.21ರಂದು ಸಂಚರಿಸುವ ರೈಲಿನ ಸಂಚಾರ ಕುಮಟಾ ನಿಲ್ದಾಣದಲ್ಲೇ ಕೊನೆ ಗೊಳ್ಳಲಿದೆ. ಹೀಗಾಗಿ ಕುಮಟ ಮತ್ತು ಮಡಗಾಂವ್ ನಡುವಿನ ಅಂದಿನ ಸಂಚಾರವನ್ನು ರದ್ದುಪಡಿಸಲಾಗಿದೆ.
ಅದೇ ರೀತಿ ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ನಡುವೆ ಅಂದು ಸಂಚರಿಸುವ ರೈಲಿನ ಸಂಚಾರ ನಿಗದಿತ ಸಮಯಕ್ಕೆ ಕುಮಟಾದಿಂದ ಪ್ರಾರಂಭಗೊಳ್ಳಲಿದೆ. ಹೀಗಾಗಿ ಮಡಗಾಂವ್ ಜಂಕ್ಷನ್ ಹಾಗೂ ಕುಮಟಾ ನಡುವಿನ ಅಂದಿನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.