ಉಡುಪಿ, ಜ.13: ಲೇಖಕ, ಸಾಮಾಜಿಕ ಕಾರ್ಯಕರ್ತರಾಗಿರುವ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಶ್ರೀರಾಮ ದಿವಾಣ ವೂಡುಬೆಳ್ಳೆ ಬರೆದ ಲೇಖನಗಳ ಸಂಕಲನ ‘ಜಾಗರ: ಇದು ಪ್ರತಿಸ್ಪಂದನೆಯ ಮೊಳಕೆ ಮತ್ತು ಇತರ ಲೇಖನಗಳು’ ಕೃತಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ಮಣಿಪಾಲ ಮಂಚಿಕೆರೆಯ ’ನವಮಿ’ಯಲ್ಲಿ ನಡೆಯಿತು.
ಬಹುಭಾಷಾ ಕವಿ ಅಂಶುಮಾಲಿ ಕೃತಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ದೈವ ನರ್ತನ ಕಲಾವಿದ ಸುಧಾಕರ ಪಾಣಾರ ಮೂಡುಬೆಳ್ಳೆ ಹಾಗೂ ಪರಿಸರ ವಾದಿ ಪ್ರೇಮಾನಂದ ಕಲ್ಮಾಡಿ ಮೊದಲಾದವರು ಉಪಸ್ಥಿತರಿದ್ದರು.
