ಉಳ್ಳಾಲ: ಬರಹ ಮತ್ತು ಹರಿತವಾದ ಲೇಖನಿಯಿಂದ ಸಮಾಜದ ಅಂಧಶ್ರದ್ಧೆಯನ್ನು ಅಳಿಸಲು ಸಾಧ್ಯವಿದೆ. ಅವರ ಸಹನೆ ಸಂಯಮ ಸರಳತೆ ಸಮಾಜಕ್ಕೆ ಮಾದರಿಯಾಗಿದೆ. ಸಾಹಿತ್ಯದಿಂದ ಮನೋವಿಕಾಸಗೊಳ್ಳಲಿದೆ. ಹಾಗಾಗಿ ಸಾಹಿತ್ಯದ ಉಳಿವು ಅಗತ್ಯ ಎಂದು ನಿವೃತ್ತ ಶಿಕ್ಷಕಿ ಜಾನಕಿ ಪುತ್ರನ್ ಅಭಿಪ್ರಾಯಪಟ್ಟರು.
ಮೊಗವೀರ ಪಟ್ಣದ ಉಳ್ಳಾಲ ಮಾರುತಿ ಯುವಕ ಮಂಡಲ, ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚುಸಾಪ ದ.ಕ. ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಉಳ್ಳಾಲ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಫೈರೋಝ್ ಡಿಎಂ, ಉಡುಪಿ ಚುಸಾಪ ಜಿಲ್ಲಾಧ್ಯಕ್ಷ ಕಾ.ವೀ. ಕೃಷ್ಣದಾಸ್, ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ, ಕಾರ್ಯದರ್ಶಿ ವಾಣಿ ಲೋಕಯ್ಯ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇರಾ ನೇಮು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಮಾರುತಿ ಯುವಕ ಮಂಡಲದ ಪರವಾಗಿ ಅದರ ಸದಸ್ಯರು ಹಾಗೂ ವ್ಯಾಘ್ರ ಚಾಮುಂಡಿ ದೇವಸ್ಥಾನದ ಗುರಿಕಾರ ರಘು ವೀರ ಸಾಲ್ಯಾನ್ ಮೊಗವೀರಪಟ್ನ ಉಳ್ಳಾಲ ಮತ್ತು ಇರಾ ಯುವಕ ಮಂಡಲದ ಪರವಾಗಿ ಅದರ ಉಪಾಧ್ಯಕ್ಷ ದಿನೇಶ್ ಪಕ್ಕಳ ಮತ್ತು ಸದಸ್ಯ ಸೂರ್ಯಪ್ರಕಾಶ್ ಅವರನ್ನು ಗೌರವಿಸಲಾಯಿತು.
ಉಳ್ಳಾಲ ಠಾಣೆಯ ಎಎಸ್ಸೈ ಮನ್ಸೂರ್ ಮುಲ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ ಸುರೇಶ್ ನೆಗಳಗುಳಿ, ರೇಮಂಡ್ ಡಿಕುನ್ಹ, ಚಂದ್ರಿಕಾ ಕೆೃರಂಗಳ, ಅನಾರ್ಕಲಿ ಸಲೀಂ ಮಂಡ್ಯ, ಎಸ್‌ಕೆ ಕುಂಪಲ, ರಶ್ಮಿ ಸನಿಲ್, ಸುಮಂಗಲ ದಿನೇಶ್ ಶೆಟ್ಟಿ, ಉಮೇಶ್ ಕಾರಂತ್, ಶಮೀಮಾ ಕುತ್ತಾರ್, ವೆಂಕಟೇಶ್ ಗಟ್ಟಿ ಹೆಚ್‌ಆರ್ ಅರ್ಕುಳ, ರೇಖಾ ಸುದೇಶ್ ರಾವ್ ಕವನಗಳನ್ನು ವಾಚಿಸಿದರು.
ಉಳ್ಳಾಲ ತಾಲೂಕು ಚುಸಾಪ ಅಧ್ಯಕ್ಷ ಎಡ್ವರ್ಡ್ ಲೋಬೋ ಸ್ವಾಗತಿಸಿದರು. ಸುಮಂಗಲಾ ದಿನೇಶ್ ಶೆಟ್ಟಿ ವಂದಿಸಿದರು. ಎಸ್‌ಕೆ ಕುಂಪಲ ಕಾರ್ಯಕ್ರಮ ನಿರೂಪಿಸಿದರು.