Home ಕರ್ನಾಟಕ ಲೈಂಗಿಕ ಹಗರಣ: ಪ್ರಜ್ವಲ್ ರೇವಣ್ಣರಿಗೆ ಸೇರಿದ 3 ಫಾರ್ಮ್ ಹೌಸ್ ಗಳಿಗೆ ಸಿಟ್ ದಾಳಿ

ಲೈಂಗಿಕ ಹಗರಣ: ಪ್ರಜ್ವಲ್ ರೇವಣ್ಣರಿಗೆ ಸೇರಿದ 3 ಫಾರ್ಮ್ ಹೌಸ್ ಗಳಿಗೆ ಸಿಟ್ ದಾಳಿ

31
0

ಬೆಂಗಳೂರು, ಮೇ 3: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಸಿಟ್) ತನಿಖೆ ಚುರುಕುಗೊಳಿಸಿದ್ದು, ಪ್ರಜ್ವಲ್ ಗೆ ಸೇರಿರುವ ಮೂರು ಫಾರ್ಮ್ ಹೌಸ್ ಗಳಿಗೆ ದಾಳಿ ನಡೆಸಿದೆ.

ಇಂದು ಮುಂಜಾನೆ 3:30ರ ಸುಮಾರಿಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್ ಗೆ ಸೇರಿರುವ ತೋಟದಮನೆ, ಹೊಳೆನರಸೀಪುರದಲ್ಲಿರುವ ತೋಟದಮನೆ ಹಾಗೂ ಪಡುವಲಹಿಪ್ಪೆಯ ಫಾರ್ಮ್ ಹೌಸ್ ಗೆ ದಾಳಿ ನಡೆಸಿದರುವ ಸಿಟ್ ದಾಳಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸುಮಾರು 30ಕ್ಕ ಅಧಿಕ ಅಧಿಕಾರಿ, ಸಿಬ್ಬಂದಿ ಮೂರೂ ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here