ಸಂಸದ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಅವರು ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು. ನವದೆಹಲಿ: ಸಂಸದ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಅವರು ಮಂಗಳವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ನವದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಭೇಟಿ ವೇಳೆ ದೇವೇಗೌಡ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮ್ಮ ಜೀವನಾಗಾಥೆಯ ಪುಸ್ತಕವನ್ನು ನೀಡಿದರು.
“Furrows in a field : The unexplored life of H.D. Deve Gowda” ಪುಸ್ತಕದ ಪ್ರತಿಯನ್ನು ಓಂ ಬಿರ್ಲಾ ಅವರಿಗೆ ದೇವೇಗೌಡ ಅವರು ನೀಡಿದರು. ಬಳಿಕ ಇಬ್ಬರೂ ನಾಯಕರು ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಪ್ರಸ್ತುತತೆಯ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ನಂತರ ದೇವೇಗೌಡ ಅವರು, ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.
ರಾಷ್ಟ್ರಪತಿಗಳ ಭೇಟಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ದೇವೇಗೌಡ ಅವರು, ವಿಚಾರಗಳನ್ನು ಉತ್ತಮ ರೀತಿಯಲ್ಲಿ ವಿನಿಮಯ ಮಾಡಿಕೊಂಡೆವು. ಅವರ ಸಹಾನುಭೂತಿ ನನ್ನನ್ನು ಪ್ರೇರೇಪಿಸಿತು. ಭಾರತದ ಪ್ರಗತಿಗಾಗಿ ಅವರ ದೃಷ್ಟಿಕೋನವನ್ನು ನಾನು ಬಹಳ ಪ್ರಶಂಸಿಸುತ್ತೇನೆ ಎಂದು ಹೇಳಿದ್ದಾರೆ.