ಬೆಳಗಾವಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಬೆಳಗಾವಿ ಲೋಕಸಭೆ ಟಿಕೆಟ್ ಗಾಗಿ ಪೈಫೊಟಿ ತೀರ್ವಗೊಂಡಿದೆ. ಯಾರ ಪಾಲಾಗುತ್ತೆ ಬೆಳಗಾವಿ ಲೋಕಸಭಾ ಕೈ ಟಿಕೆಟ್? ಎನ್ನುವ ಅನೇಕ ಗೊಂದಲಗಳಿವೆ. ಯಾಕಂದ್ರೆ ಕೈಟಿಕೆಟ್ ಗಾಗಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ನಾಯಕರಿಂದ ಲಾಭಿ ನಡೆಯುತ್ತಿವೆ. ಮಾಜಿ ಸಂಸದ ಅಮರಸಿಂಹ ಪಾಟೀಲ,ಕಿರಣ್ ಸಾಧುನವರ್,ಮೃಣಾಲ್ ಹೆಬ್ಬಾಳ್ಕರ್ ಕೈ ಟಿಕೆಟ್ ಗಾಗಿ ಲಾಭಿ ನಡೆಯುತ್ತಿದ್ದು, ಈಗಿನಿಂದಲೇ ತೆರೆಮರೆಯ ಕಸರತ್ತು ಜೋರಾಗಿದೆ.
‘ಲೋಕ’ಸಮರವನ್ನೇ ಮಕ್ಕಳ ರಾಜಕೀಯ ಭವಿಷ್ಯದ ಮೆಟ್ಟಿಲು ಮಾಡಿಕೊಳ್ಳಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದು, ಬೆಳಗಾವಿ ಅಥವಾ ಚಿಕ್ಕೋಡಿ ಲೋಕಸಭೆಗೆ ಮಗಳು ಪ್ರಿಯಾಂಕಾ ಜಾರಕಿಹೊಳಿರನ್ನ ಕಣಕ್ಕಿಳಿಸಲು ಸಚಿವ ಸತೀಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿದ್ರೆ ಬೆಳಗಾವಿ ಲೋಕಸಭೆಯಿಂದ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಂತನೆ ನಡೆಸಿದ್ದಾರೆ.
CP Yogeshwar; ಕಾಂಗ್ರೆಸ್ ಇಂದು ಬಹುಮತದಿಂದ ಅಧಿಕಾರಕ್ಕೆ ಬರಲು ನಮ್ಮ ಜಗಳ ಕಾರಣ – ಸಿ.ಪಿ.ಯೋಗೇಶ್ವರ್
10ವಿಧಾನಸೌಧ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಹತ್ತರಲ್ಲಿ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್ ಶಾಸಕರು, 4ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದು, ಬೆಳಗಾವಿ ಲೋಕಸಭಾ ಕ್ಷೇತ್ರವನ್ನ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ ಹೊಂದಿದ್ದಾರೆ. ಇನ್ನೂ ಲೋಕಸಭಾ ಕಾಂಗ್ರೆಸ್ ಟಿಕೆಟ್ ಯಾರ ಪಾಲಾಗುತ್ತೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ವರದಿ:- ಬಾಳು ತೇರದಾಳ AIN news ಬೆಳಗಾವಿ
The post ಲೋಕ’ಸಮರವನ್ನೇ ಮಕ್ಕಳ ರಾಜಕೀಯ ಭವಿಷ್ಯದ ಮೆಟ್ಟಿಲು ಮಾಡಿಕೊಳ್ಳಲು ಪ್ಲ್ಯಾನ್ appeared first on Ain Live News.
