ನಟ ಮಾಸ್ಟರ್ ಆನಂದ್ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ಜನರನ್ನು ವಂಚಿಸಿರುವ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎಸಿಎಮ್ಎಮ್ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರು: ನಟ ಮಾಸ್ಟರ್ ಆನಂದ್ ಪುತ್ರಿಯಾದ ಬಾಲನಟಿ ವಂಶಿಕಾ ಹೆಸರಿನಲ್ಲಿ ಜನರನ್ನು ವಂಚಿಸಿರುವ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎಸಿಎಮ್ಎಮ್ ಕೋರ್ಟ್ ಆದೇಶ ಹೊರಡಿಸಿದೆ.
ವಂಚನೆ ಬಗ್ಗೆ ವಂಶಿಕಾ ತಾಯಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿಶಾ ನರಸಪ್ಪಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ನಂತರ 39ನೇ ಎಸಿಎಮ್ಎಮ್ ಕೋರ್ಟ್ ಮುಂದೆ ನಿಶಾಳನ್ನು ಹಾಜರುಪಡಿಸಿದ್ದರು.
ಯಶಸ್ವಿನಿ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಆರೋಪಿ ನಿಶಾ ಎಂಬಾಕೆಯ ಪರಿಚಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ತಾಯಿ–ಮಗಳನ್ನು ಆರೋಪಿ ಆಹ್ವಾನಿಸಿದ್ದರು. ಇದರಿಂದ ಮತ್ತಷ್ಟು ಹತ್ತಿರವಾಗಿದ್ದರು.
ಇದನ್ನೂ ಓದಿ: ನಟ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ವಂಚನೆ, ಎಫ್ಐಆರ್ ದಾಖಲು
ವಂಶಿಕಾ ಹೆಸರು ಹಾಗೂ ಫೋಟೊಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ, ಮಕ್ಕಳಿಗೆ ಟಿ.ವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕೊಡಿಸುತ್ತೇನೆ ಎಂದು ಜಾಹೀರಾತು ನೀಡುತ್ತಿದ್ದರು. ಫೋಟೊಶೂಟ್ ಹೆಸರಿನಲ್ಲಿ ಪೋಷಕರಿಂದ ಹಣ ಪಡೆಯುತ್ತಿದ್ದರು. ನಂತರ, ಯಾವುದೇ ಅವಕಾಶ ಕೊಡಿಸದೇ ಜನರನ್ನು ವಂಚಿಸುತ್ತಿದ್ದರು. ಇದುವರೆಗೂ 17 ಜನರಿಗೆ ನಿಶಾ ವಂಚಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.