Home Uncategorized ವರದಿಯ ಸ್ವರೂಪ ಏನೆಂದು ಮೊದಲು ನಿರ್ಧಾರವಾಗಲಿ : ಶಾಸಕ ಸುನಿಲ್‌ ಕುಮಾರ್

ವರದಿಯ ಸ್ವರೂಪ ಏನೆಂದು ಮೊದಲು ನಿರ್ಧಾರವಾಗಲಿ : ಶಾಸಕ ಸುನಿಲ್‌ ಕುಮಾರ್

30
0

ಉಡುಪಿ: ಹತ್ತು ವರ್ಷಗಳ ಸುದೀರ್ಘ ವನವಾಸದ ಬಳಿಕ ಹಿಂದುಳಿದ ವರ್ಗಗಳ ಆಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸ್ವೀಕರಿಸಿರುವ ವರದಿಯ ಸ್ವರೂಪ ಏನೆಂಬುದು ಮೊದಲು ನಿರ್ಧಾರವಾಗಬೇಕಿದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಇದು ಜಾತಿಗಣತಿಯೋ? ಶೈಕ್ಷಣಿಕ ಸಮೀಕ್ಷೆಯೋ? ಅಥವಾ ಆರ್ಥಿಕ ಸಮೀಕ್ಷೆಯೋ? ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. 150 ಕೋಟಿ ರೂ. ಗೂ ಹೆಚ್ಚು ಹಣ ಖರ್ಚು ಮಾಡಿರುವ ರಾಜ್ಯ ಸರಕಾರ ಸಮಾಜದಲ್ಲಿ ಅಂತಿಮವಾಗಿ ಗೊಂದಲವನ್ನು ಸೃಷ್ಟಿ ಮಾಡಿದೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈ ವರದಿ ಜಾರಿಗೆ ಮುನ್ನ ವಿಸ್ತೃೃತ ಚರ್ಚೆಯ ಅಗತ್ಯವಿದೆ. ಹೀಗಾಗಿ ಶಾಸನ ಸಭೆಯಲ್ಲಿ ವರದಿಯನ್ನು ಮಂಡಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯ ಬೇಕಾದದ್ದು ಸರಕಾರದ ಕರ್ತವ್ಯ. ಈ ವರದಿಯ ವಿಚಾರದಲ್ಲಿ ದಶಮಾನದ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯನವರು ವರದಿಯನ್ನು ಸ್ವೀಕರಿಸಿ ಕೈ ತೊಳೆದುಕೊಂಡರೆ ಸಾಲುವುದಿಲ್ಲ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಆಶಯಕ್ಕೆ ಆಯೋಗ ಎಷ್ಟರಮಟ್ಟಿಗೆ ಸ್ಪಂದಿಸಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಪ್ರತಿಪಾದಿಸಿದರು.

ಗೊಂದಲಗಳಿಗೆ ಮೊದಲು ತೆರೆ ಬೀಳಲಿ: ಸಿದ್ದರಾಮಯ್ಯನವರಿಗೆ ಬದ್ಧತೆ ಇದ್ದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ತಕ್ಷಣವೇ ವರದಿಯನ್ನು ಸ್ವೀಕರಿಸಿ ಸದನದಲ್ಲಿ ಮಂಡಿಸಬೇಕಿತ್ತು. ಆದರೆ ನಿಮ್ಮ ಉದ್ದೇಶ ಗೊಂದಲವನ್ನು ಜೀವಂತ ವಾಗಿಡುವುದಷ್ಟೇ ಆಗಿದೆ. ಹೀಗಾಗಿ ಅಧಿವೇಶನದ ಕೊನೆಯ ದಿನ ವರದಿ ಸ್ವೀಕರಿಸಿದ್ದೀರಿ. ಈ ಪಲಾಯನವಾದ ಸಾಕು. ಬದ್ಧತೆ ಇದ್ದರೆ ತಕ್ಷಣ ಸಂಪುಟ ಸಭೆಯಲ್ಲಿ ವರದಿ ಸ್ವೀಕರಿಸಿ, ಚರ್ಚೆ ನಡೆಸುವುದಕ್ಕೆ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಿರಿ ಎಂದು ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here