Home Uncategorized ವರ್ಚ್ಯೂವಲ್ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ; ಮಧ್ಯಾಹ್ನ ಕೊಪ್ಪಳಕ್ಕೆ ಜೆಪಿ ನಡ್ಡಾ ಆಗಮನ

ವರ್ಚ್ಯೂವಲ್ ಮೂಲಕ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ; ಮಧ್ಯಾಹ್ನ ಕೊಪ್ಪಳಕ್ಕೆ ಜೆಪಿ ನಡ್ಡಾ ಆಗಮನ

26
0

ವಿಜಯಪುರ: ರಾಜ್ಯದ 10 ಜಿಲ್ಲೆಗಳಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯಗಳ ಉದ್ಘಾಟನೆ ಹಾಗೂ 03 ಜಿಲ್ಲೆಗಳ ನೂತನ ಕಾರ್ಯಾಲಯಗಳ ಶಂಕುಸ್ಥಾಪನೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದೆ. ಇಂದು (ಡಿ 15) ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಆಗಮಿಸಲಿದ್ದಾರೆ. ಸದ್ಯ ಈಗಾಗಲೇ ಅನೇಕ ಕಡೆ ವರ್ಚ್ಯೂವಲ್ ಮೂಲಕ ಜಿಲ್ಲಾ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಮಾಡಲಾಗಿದೆ.

ದೆಹಲಿಯಲ್ಲೇ ಕೂತು ನಡ್ಡಾ ಅವರು ವರ್ಚ್ಯೂವಲ್ ಮೂಲಕ ವಿಜಯಪುರ, ಬಾಗಲಕೋಟೆ, ಗದಗ, ಬಳ್ಳಾರಿ, ಬೀದರ್, ರಾಯಚೂರು, ಬಳ್ಳಾರಿ, ಚಾಮರಾಜನಗರ, ಹಾವೇರಿ, ಕೋಲಾರದಲ್ಲಿ ಏಕಕಾಲಕ್ಕೆ ಜಿಲ್ಲಾ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಮಾಡಿದ್ದಾರೆ.

Live : ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರಿಂದ ಕೊಪ್ಪಳದಲ್ಲಿ ರಾಜ್ಯದ 10 ಜಿಲ್ಲೆಗಳಲ್ಲಿ ನೂತನವಾಗಿ ನಿರ್ಮಿಸಿರುವ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮತ್ತು 3 ಜಿಲ್ಲೆಗಳ ಕಾರ್ಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ. https://t.co/xaM2UTdtCh

— BJP Karnataka (@BJP4Karnataka) December 15, 2022

ಕೊಪ್ಪಳಕ್ಕೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ

ಇನ್ನು ಜೆಪಿ ನಡ್ಡಾ ಅವರು ಇಂದು ಕೊಪ್ಪಳಕ್ಕೆ ಆಗಮಿಸಿ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ನೂತನ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವೇದಿಕೆ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿ ಸಚಿವರು, ಸ್ಥಳೀಯ ಶಾಸಕರು ಆಸೀನರಾಗಿದ್ದಾರೆ.

ಒಂದೇ ವೇದಿಕೆ ಮೇಲಿದ್ದರೂ ಮಾತನಾಡದ ಬೊಮ್ಮಾಯಿ, ಯಡಿಯೂರಪ್ಪ

ಕೊಪ್ಪಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಮೇಲಿದ್ದರೂ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ನಾನೊಂದು ದಿಕ್ಕು ನೀನೊಂದು ದಿಕ್ಕಿನಂತೆ ಮುನಿಸಿಕೊಂಡಿದ್ದಾರೆ. ಪಕ್ಕ ಪಕ್ಕ ಕೂತ್ರು ದೂರ ದೂರವಾಗಿದ್ದಾರೆ. ಒಬ್ಬರಿಗೊಬ್ಬರು ಮಾತನಾಡುತ್ತಿಲ್ಲ. ಕೆಲ ಹೊತ್ತಿನ ಹಿಂದೆ ನನ್ನ ಹಾಗೂ ಯಡಿಯೂರಪ್ಪ ಅವರ ಸಂಬಂಧ ತಂದೆ-ಮಗನಂತೆ ಎಂದಿದ್ದ ಬೊಮ್ಮಾಯಿಯವರು ವೇದಿಕೆ ಮೇಲೆ ಬಂದು ಯಡಿಯೂರಪ್ಪ ಅವರನ್ನು ಮಾತನಾಡಿಸದೆ ಮೊಬೈಲ್​ನಲ್ಲಿ ಬಿಜಿಯಾಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here