Home Uncategorized ವಾಹನ ಮಾಲೀಕರಿಗೆ ಖುದ್ದು ಆನ್‌ಲೈನ್‌ನಲ್ಲಿ ಆರ್‌ಸಿ ಮತ್ತು ಆಧಾರ್‌ ಲಿಂಕ್‌ ಮಾಡಬಹುದು: ಹೇಗಂತೀರಾ?

ವಾಹನ ಮಾಲೀಕರಿಗೆ ಖುದ್ದು ಆನ್‌ಲೈನ್‌ನಲ್ಲಿ ಆರ್‌ಸಿ ಮತ್ತು ಆಧಾರ್‌ ಲಿಂಕ್‌ ಮಾಡಬಹುದು: ಹೇಗಂತೀರಾ?

29
0

ಮೋಟಾರು ವಾಹನ ಇಲಾಖೆಯ ‘ಪರಿವಾಹನ್‌’ ಸೈಟ್‌ನಲ್ಲಿ ವಾಹನ ನೋಂದಣಿ (ಆರ್‌ಸಿ) ದಾಖಲೆಗಳು ಮತ್ತು ಮಾಲೀಕರ ಆಧಾರ್‌ ಲಿಂಕ್‌ ಮಾಡಿಸಬೇಕು. ಒಂದು ವೇಳೆ ಆಧಾರ್‌ ಕಾರ್ಡ್‌ ಮತ್ತು ಆರ್‌ಸಿಯಲ್ಲಿ ಹೆಸರು ಮತ್ತು ಮೊಬೈಲ್‌ ಫೋನ್‌ ಸಂಖ್ಯೆ ಬೇರೆ ಬೇರೆಯಾಗಿದ್ದರೆ ವಾಹನಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಾಗಲಿದೆ.

ವಾಹನಕ್ಕೆ ಸಂಬಂಧಿಸಿದ ಎಲ್ಲ ಸೇವೆಗಳಿಗೆ ಶುಲ್ಕ ಪಾವತಿಸಲು ವಾಹನ ಮಾಲೀಕರ ಆರ್‌ಸಿ ಹೆಸರು ಮತ್ತು ಆಧಾರ್‌ ಹೆಸರು ಒಂದೇ ಆಗಿರಬೇಕು. ಆಧಾರ್‌ನಲ್ಲಿ ನಮೂದಿಸಿದ ದೂರವಾಣಿ ಸಂಖ್ಯೆಯನ್ನು ಆರ್‌ಸಿಯಲ್ಲಿಯೂ ನಮೂದಿಸಿರಬೇಕು. ಈ ಹಿಂದೆ ಪಡೆಯಲಾದ ಆಧಾರ್‌ ಕಾರ್ಡ್‌ನಲ್ಲಿ ಹೆಸರಿನ ಜತೆಗೆ ಇನಿಶಿಯಲ್‌ ಇಲ್ಲದೆ, ಆರ್‌ಸಿಯಲ್ಲಿ ಇನಿಶಿಯಲ್‌ ಇದ್ದರೂ ಸಮಸ್ಯೆಯಾಗಲಿದೆ. ಹೆಸರು, ಇನಿಶಿಯಲ್‌ ವ್ಯತ್ಯಾಸವಿದ್ದರೂ ಮೋಟಾರು ವಾಹನ ಇಲಾಖೆಯ ಸೇವೆ ಪಡೆಯುವಲ್ಲಿ ಅಡ್ಡಿಯಾಗಲಿದೆ.

ಬ್ಯಾಂಕ್‌ ಸಾಲದಲ್ಲಿ ಖರೀದಿಸಿದ ವಾಹನಗಳಿಗೆ, ಸಾಲ ಸಂದಾಯದ ಬಳಿಕ ಆರ್‌ಸಿಯಿಂದ ಬ್ಯಾಂಕ್‌ ಸಾಲದ ಮಾಹಿತಿಯನ್ನು ತೆಗೆದುಹಾಕಲು ಮತ್ತು ಮಾಲೀಕತ್ವವನ್ನು ಬದಲಾಯಿಸಲು ಆಧಾರ್‌ ಮತ್ತು ಆರ್‌ಸಿ ಮಾಹಿತಿಯು ವಿಭಿನ್ನವಾಗಿದ್ದರೆ ಪರಿವಾಹನ್‌ ಸೈಟ್‌ನಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದು. ಇಂತಹ ಪರಿಸ್ಥಿತಿ ಎದುರಾದರೆ ಆರ್‌ಸಿಯಲ್ಲಿನ ಮಾಹಿತಿಯನ್ನು ಬದಲಾಯಿಸಬೇಕು ಅಥವಾ ಆರ್‌ಸಿಯಲ್ಲಿರುವಂತೆ ಆಧಾರ್‌ ಕಾರ್ಡ್‌ನಲ್ಲಿ ಹೆಸರು ಮತ್ತು ಫೋನ್‌ ಸಂಖ್ಯೆಯನ್ನು ನಮೂದಿಸಬೇಕು.

ಕೇಂದ್ರ ಸರಕಾರವು ವಾಹನ ನೋಂದಣಿ ದಾಖಲೆ ಮತ್ತು ಆಧಾರ್‌ನ್ನು 10 ದಿನಗಳ ಹಿಂದೆ ಲಿಂಕ್‌ ಮಾಡಿದೆ. ಪರಿವಾಹನ್‌ ಸೈಟ್‌ನಲ್ಲಿ ಶುಲ್ಕ ಪಾವತಿಸಲು ಆನ್‌ಲೈನ್‌ ಕೇಂದ್ರಗಳಿಗೆ ಭೇಟಿ ನೀಡಿದ ಹಲವರಿಗೆ ಸೈಟ್‌ಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇಂತಹ ವಾಹನ ಮಾಲೀಕರು ಪರಿವಾಹನ್‌ ಸೈಟ್‌ನಲ್ಲಿ ಹೆಸರು ಅಥವಾ ಮೊಬೈಲ್‌ ಸಂಖ್ಯೆ ಬದಲಾವಣೆ ಮಾಡಿ, ಆರ್‌ಟಿಒ ಅನುಮೋದನೆ ಪಡೆದ ಬಳಿಕ ಮಾತ್ರ ಶುಲ್ಕ ಪಾವತಿಸಲು ಸಾಧ್ಯವಾಗುವುದು.

The post ವಾಹನ ಮಾಲೀಕರಿಗೆ ಖುದ್ದು ಆನ್‌ಲೈನ್‌ನಲ್ಲಿ ಆರ್‌ಸಿ ಮತ್ತು ಆಧಾರ್‌ ಲಿಂಕ್‌ ಮಾಡಬಹುದು: ಹೇಗಂತೀರಾ? appeared first on Ain Live News.

LEAVE A REPLY

Please enter your comment!
Please enter your name here