ಉಡುಪಿ, ಜ.೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಅನ್ನು ಪಡೆಯಲು ಮತ್ತು ನವೀಕರಿಸಲು -https://sevasindhuservices.karnataka.gov.in- ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2023ರಲ್ಲಿ ವಿತರಿಸಿದ ಬಸ್‌ಪಾಸ್‌ಗಳ ಅವಧಿಯು 2023ರ ಡಿಸೆಂಬರ್ 31ರಂದು ಮುಕ್ತಾಯಗೊಂಡಿದ್ದು, 2024ನೇ ಜನವರಿ 15ರಿಂದ ಹೊಸ ಪಾಸ್‌ಗಳನ್ನು ಪಡೆಯಲು ಮತ್ತು ನವೀಕರಿಸಲು ಕ್ರಮಕೈಗೊಳ್ಳಲಾಗಿದೆ. 2023ರಲ್ಲಿ ವಿತರಿಸಿರುವ ಬಸ್‌ಪಾಸ್‌ಗಳನ್ನು 2024ರ ಫೆಬ್ರವರಿ 29ರವರೆಗೆ ಬಸ್‌ಗಳಲ್ಲಿ ಮಾನ್ಯ ಮಾಡಲಾಗುತ್ತದೆ.
ನಿಗಮದ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳನ್ನು ಪಡೆಯಲು ಫಲಾನುಭವಿಗಳು ಎರಡು ಇತ್ತೀಚಿನ ಭಾವಚಿತ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿತರಿಸಿರುವ ಗುರುತಿನ ಚೀಟಿಯ ಮೂಲಪ್ರತಿ ಅಥವಾ ಹೊಸದಾಗಿ ನೀಡಲಾಗಿರುವ ಯುಡಿ ಐಡಿ ಕಾರ್ಡಿನ ಮೂಲಪ್ರತಿ ಹಾಗೂ ಆಧಾರ್ ಕಾರ್ಡ್ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಂಗಳೂರು ವಿಭಾಗ, ಮಂಗಳೂರು ಇವರನ್ನು ಸಂಪರ್ಕಿ ಸಬಹುದು ಎಂದು ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.