Home Uncategorized ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹವಾದರೂ ಜೀವನಾಂಶಕ್ಕೆ ಅರ್ಹ:ಮುಂಬೈ ಹೈಕೋರ್ಟ್

ವಿಚ್ಛೇದಿತ ಮುಸ್ಲಿಂ ಮಹಿಳೆ ಮರುವಿವಾಹವಾದರೂ ಜೀವನಾಂಶಕ್ಕೆ ಅರ್ಹ:ಮುಂಬೈ ಹೈಕೋರ್ಟ್

37
0

ಮುಂಬೈ: ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಮರುವಿವಾಹವಾದರೂ ಮುಸ್ಲಿಂ ಮಹಿಳೆಯರ (ವಿಚ್ಛೇನ ವೇಳೆ ಹಕ್ಕುಗಳ ರಕ್ಷಣೆ) ಕಾಯ್ದೆ-1986ರ ಅನ್ವಯ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು ಎಂದು ಮುಂಬೈ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

“ಈ ಕಾಯ್ದೆಯ ಮುಖ್ಯ ಸಾರವೆಂದರೆ, ವಿಚ್ಛೇದಿತ ಮಹಿಳೆ ಮರು ವಿವಾಹವಾದರೂ, ನ್ಯಾಯಸಮ್ಮತ ಜೀವನಾಂಶವನ್ನು ಪಡೆಯಲು ಅರ್ಹಳು. ಸೆಕ್ಷನ್ 3(1)(ಎ) ಅನ್ವಯ ಪತಿ ಮತ್ತು ಪತ್ನಿಯ ನಡುವೆ ವಿಚ್ಛೇದನ ಆಗಿದೆ ಎಂಬ ಅಂಶವಷ್ಟೇ ಜೀವನಾಂಶ ಕೋರಲು ಪತ್ನಿಗೆ ಅರ್ಹತೆ ನೀಡುತ್ತದೆ. ಇಂಥ ಅರ್ಹತೆಯು ವಿಚ್ಛೇದನವಾದ ದಿನಾಂಕದಂದೇ ಬರುತ್ತದೆ” ಎಂದು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅವರು ತಮ್ಮ ಜನವರಿ 2ರ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಪತ್ನಿಗೆ ಜೀವನಾಂಶದ ಮೊತ್ತವನ್ನು ಪಾವತಿಸುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಪೀಠ ತಳ್ಳಿಹಾಕಿದೆ. ಈ ದಂಪತಿಗೆ 2005ರ ಫೆಬ್ರುವರಿಯಲ್ಲಿ ವಿವಾಹವಾಗಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ ಇವರಿಗೆ ಹೆಣ್ಣುಮಗು ಜನಿಸಿತು. ಪತಿ ಉದ್ಯೋಗಕ್ಕಾಗಿ ಹೊರದೇಶಕ್ಕೆ ತೆರಳಿದರು. 2007ರ ಜೂನ್ ನಲ್ಲಿ ಪತ್ನಿ ಹಾಗೂ ಪುತ್ರಿ, ಪೋಷಕರ ಜತೆ ವಾಸಿಸಲು ಆರಂಭಿಸಿದರು. 2008ರಲ್ಲಿ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಪತಿ ವಿಚ್ಛೇದನ ನೀಡಿದ್ದ. ಮಹಿಳೆ ಜೀವನಾಂಶ ಕೋರಿ ಎಂಡಬ್ಲ್ಯುಪಿಎ ಅನ್ವಯ ಅರ್ಜಿ ಸಲ್ಲಿಸಿದ್ದರು. 2014ರ ಆಗಸ್ಟ್ ನಲ್ಲಿ ಚಿಪ್ಳೂಣ್ ಮ್ಯಾಜಿಸ್ಟ್ರೇಟ್ 4.3 ಲಕ್ಷ ರೂಪಾಯಿ ಜೀವನಾಂಶವನ್ನು ಮಂಜೂರು ಮಾಡಿದ್ದರು. 2017ರ ಮೇ ತಿಂಗಳಲ್ಲಿ ಖೇಡ್ ಸೆಷನ್ಸ್ ನ್ಯಾಯಾಲಯ ಇದನ್ನು 9 ಲಕ್ಷ ರೂಪಾಯಿಗೆ ಹೆಚ್ಚಿಸಿತು.

ಈ ಮಹಿಳೆ 2018ರ ಏಪ್ರಿಲ್ನಲ್ಲಿ ಮರು ವಿವಾಹವಾಗಿ 2018ರ ಅಕ್ಟೋಬರ್ ನಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂದು ಕೋರ್ಟ್ಗೆ ತಿಳಿಸಲಾಗಿತ್ತು. ಮಹಿಳೆ ಮರು ವಿವಾಹವಾಗಿರುವುದಿಂದ ಜೀವನಾಂಶ ಪಡೆಯುವ ಅರ್ಹತೆ ಹೊಂದಿಲ್ಲ ಎಂದು ಪತಿಯ ವಕೀಲರಾದ ಶಹೀನ್ ಕಪಾಡಿಯಾ ಹಾಗೂ ವರ್ಷಾಲಿ ಮಿಯಾಂದಾದ್ ವಾದಿಸಿದ್ದರು.

LEAVE A REPLY

Please enter your comment!
Please enter your name here