Home Uncategorized ವಿಜಯಪುರದ ಮಾಲೊಂದರಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಅನುಚಿತ ವರ್ತನೆ!

ವಿಜಯಪುರದ ಮಾಲೊಂದರಲ್ಲಿ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್ ಅನುಚಿತ ವರ್ತನೆ!

23
0

ವಿಜಯಪುರ: ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಭಾರತದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ (Rajeshwari Gaikwad) ಅವರಿಗೆ ಜನಪ್ರಿಯತೆ, ಸೆಲಿಬ್ರಿಟಿ ಸ್ಟೇಟಸ್ ಮತ್ತು ಇತ್ತೀಚಿಗೆ ಮಹಿಳಾ ಕ್ರಿಕೆಟರ್ ಗಳಿಗೆ ಪುರುಷ ಕ್ರಿಕೆಟರ್ ಗಳಿಗೆ ದೊರಕುವಷ್ಟೇ ಮ್ಯಾಚ್ ಫೀ ಮತ್ತು ಸಂಭಾವನೆ ನೀಡುವ ಬಗ್ಗೆ ಬಿಸಿಸಿಐ ಮಾಡಿರುವ ಘೋಷಣೆ ನೆತ್ತಿಗೇರಿದೆ ಮಾರಾಯ್ರೇ. ಭಾರತದ ಪರ 2 ಟೆಸ್ಟ್ ಮತ್ತು 64 ಒಡಿಐ ಹಾಗೂ 44 ಟಿ20ಐ ಆಡಿರುವ ಎಡಗೈ ಸ್ಪಿನ್ನರ್ ರಾಜೇಶ್ವರಿ, 200 ಟೆಸ್ಟ್ ಮತ್ತು 463 ಒಡಿಐ ಆಡಿ ರಿಟೈರಾಗಿರುವ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಂದ ಬಹಳಷ್ಟು ಕಲಿಯಬೇಕಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ವಿಜಯಪುರದ ಮಾಲೊಂದರಲ್ಲಿ ಸ್ನೇಹಿತೆಯೊಂದಿಗೆ ಶಾಪಿಂಗ್ ಹೋಗಿದ್ದ ರಾಜೇಶ್ವರಿ ಅಲ್ಲಿ ದಾಂಧಲೆ ನಡೆಸಿದ್ದು ಮಾಲ್ ನ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದೆ. ದಾಂಧಲೆಗೆ ಕಾರಣವೇನೇ ಇರಲಿ ಸೆಲಿಬ್ರಿಟಿಗಳೆನಿಸಿಕೊಂಡವರು ಸಾರ್ವಜಿನಿಕವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಚಿನ್, ವಿರಾಟ್ ಕೊಹ್ಲಿ (Virat Kohli) ಮೊದಲಾದ ಸೂಪರ್ ಸ್ಟಾರ್ ಗಳ ಸಾರ್ವಜನಿಕ ಬದುಕಿನಲ್ಲಿ ಒಂದಾದರೂ ಕಪ್ಪು ಚುಕ್ಕೆ ಇದೆಯಾ ರಾಜೇಶ್ವರಿ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here