ಬೆಂಗಳೂರ:
ಬಿಜೆಪಿ ನೂತನ ಅಧ್ಯಕ್ಷ ವಿಜಯೇಂದ್ರ ಅವರನ್ನು ಮಾಜಿ ಸಚಿವರಾದ ಸಿಟಿ ರವಿ ಅವರು ಭೇಟಿ ಮಾಡಿದರು.
ಬೆಂಗಳೂರಿನ ಬಿವೈ ವಿಜಯೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ, ಶಾಲು ಹೊದಿಸಿ ಸಿಟಿ ರವಿ ಅಭಿನಂದಿಸಿದ್ದಾರೆ. ಇದೇ ವೇಳೆ ರಾಜಕೀಯ ಸಂಬಂಧ ಕೆಲವು ಸಮಯ ಚರ್ಚೆ ನಡೆಸಿದರು.
ಮೈಕ್ರೋ ಬ್ಲಾಗಿಂಗ್ ಸೈಟ್ ‘ಎಕ್ಸ್’ ನಲ್ಲಿ ಈ ಹಿಂದೆ ಟ್ವಿಟರ್‌ನಲ್ಲಿ ಸಂದೇಶ ಕಳುಹಿಸಿರುವ ರವಿ, ವಿಜಯೇಂದ್ರ ಅವರು ಪಕ್ಷವನ್ನು ಬಲಪಡಿಸಲಿ ಎಂದು ಹಾರೈಸಿದ್ದಾರೆ. “ಬೆಂಗಳೂರಿನ ನನ್ನ ಸ್ವಗ್ರಹಕ್ಕೆ ಆಗಮಿಸಿದ @BJP4Karnataka ದ ನಿಯೋಜಿತ ಅಧ್ಯಕ್ಷ ಶ್ರೀ @BYVijayendra ಅವರಿಗೆ ದೀಪಾವಳಿಯ ಶುಭಾಶಯ ತಿಳಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಯೋಜಿತನಾಗಿರುವುದಕ್ಕೆ ಅಭಿನಂದಿಸಿ, ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧನಾಗಿ ಪಕ್ಷವನ್ನು ಬಲಪಡಿಸಿ ಮುನ್ನೆಡೆಸಿ ಎಂದು ಹಾರೈಸಿದೆ,” ಎಂದು ಹೇಳಿದರು.
ಬೆಂಗಳೂರಿನ ನನ್ನ ಸ್ವಗ್ರಹಕ್ಕೆ ಆಗಮಿಸಿದ @BJP4Karnataka ದ ನಿಯೋಜಿತ ಅಧ್ಯಕ್ಷ ಶ್ರೀ @BYVijayendra ಅವರಿಗೆ ದೀಪಾವಳಿಯ ಶುಭಾಶಯ ತಿಳಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಯೋಜಿತನಾಗಿರುವುದಕ್ಕೆ ಅಭಿನಂದಿಸಿ, ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧನಾಗಿ ಪಕ್ಷವನ್ನು ಬಲಪಡಿಸಿ ಮುನ್ನೆಡೆಸಿ ಎಂದು ಹಾರೈಸಿದೆ. pic.twitter.com/amZjcV2vH8
— C T Ravi 🇮🇳 ಸಿ ಟಿ ರವಿ (@CTRavi_BJP) November 14, 2023
ಇನ್ನೂ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಹಿನ್ನೆಲೆ, ಸಿಟಿ ರವಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿತ್ತು. ಇದೀಗ ಬಿವೈ ವಿಜಯೇಂದ್ರರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.