Home Uncategorized ವಿದುಷಿ ಭ್ರಮರಿ ಶಿವಪ್ರಕಾಶ್‌ಗೆ ಡಾಕ್ಟರೇಟ್ ಪದವಿ

ವಿದುಷಿ ಭ್ರಮರಿ ಶಿವಪ್ರಕಾಶ್‌ಗೆ ಡಾಕ್ಟರೇಟ್ ಪದವಿ

52
0

ಉಡುಪಿ, ಜ.2: ಸಾಹಿತಿ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯರ ‘ಸಮೂಹ-ಉಡುಪಿ ರಂಗಪ್ರಯೋಗಗಳ ಅಧ್ಯಯನ’ ಎಂಬ ವಿಷಯದ ಕುರಿತಾಗಿ ನಡೆಸಿದ ಸಂಶೋಧನೆಗೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯವು ವಿದುಷಿ ಭ್ರಮರಿ ಶಿವಪ್ರಕಾಶರಿಗೆ ಡಾಕ್ಟರೇಟ್ ಪದವಿ ನೀಡಿದೆ.

ಈ ಸಂಶೋಧನೆಯನ್ನು ಭ್ರಮರಿ ಅವರು ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ (ಆರ್‌ಆರ್‌ಸಿ) ಮೂಲಕ ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ವಿಭಾಗದ ಮುಖ್ಮಸ್ಥೆ ಡಾ. ನೀತಾ ಇನಾಂದಾರರ ಮಾರ್ಗದರ್ಶನದಲ್ಲಿ ನಡೆಸಿದ್ದರು.

ಭರತನಾಟ್ಯ ಕಲಾವಿದೆಯಾಗಿದ್ದು, ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್‌ನ ನಿರ್ದೇಶಕಿಯಾಗಿರುವ ವಿ. ಭ್ರಮರಿ, ಮಣಿಪಾಲ ವಿಶ್ವವಿದ್ಯಾಲಯದ ಗಾಂಧಿಯನ್ ಸೆಂಟರ್ ಫಾರ್ ಫಿಲೊಸೊಫಿಕಲ್ ಆರ್ಟ್ಸ್ ಎಂಡ್ ಸಯನ್ಸ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರ್‌ಆರ್‌ಸಿಯ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here