ಕುಂದಾಪುರ, ಜ.13: ಕುಂದಾಪುರ ಖಿದ್ಮಾ ಫೌಂಡೇಶನ್ ವತಿಯಿಂದ ಗಂಗೊಳ್ಳಿ ತೌಹೀದ್ ಎಜುಕೇಷನ್ ಟ್ರಸ್ಟ್ ಸಹಭಾ ಗಿತ್ವದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾರ್ಗ ದರ್ಶನ ನೀಡಲು ‘ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ನಂತರ ಮುಂದೇನು?’ ಎಂಬ ವಿಷಯದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾ ಗಾರವನ್ನು ಇತ್ತೀಚೆಗೆ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಅಧ್ಯಕ್ಷತೆಯನ್ನು ಅಧ್ಯಕ್ಷ ಶೇಖ್ ಅಬು ಮುಹಮ್ಮದ್ ಕುಂದಾಪುರ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಸಯ್ಯದ್ ಅಮೀನ್ ಅಹ್ಮದ್ ಮಾತನಾಡಿದರು.
ಈ ಸಂದರ್ಭದಲ್ಲಿ ತೌಹೀದ್ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ಶೇಖ್ಜಿ ಅಬ್ದುಲ್ ಹಮೀದ್ ಶಿರೂರು, ಮೆನೇಜರ್ ತಾಹಿರ್, ಟ್ರಸ್ಟಿ ಇಕ್ಬಾಲ್ ಕುಂದಾಪುರ, ಕಾರ್ಯಕ್ರಮದ ಸಂಚಾಲಕ ಬಿ.ಹೆಚ್. ಸೈಫುದ್ದೀನ್, ಖಿದ್ಮಾ ಫೌಂಡೇಶನ್ ಕೋಶಾಧಿಕಾರಿ ಮುಹಮ್ಮದ್ ಹನೀಫ್ ಕುಂದಾಪುರ, ಸದಸ್ಯರು ಗಳಾದ ಅಬ್ದುರ‌್ರಹ್ಮಾನ್ ಶಿರೂರು, ಅಬ್ದುಲ್ ಹಮೀದ್ ಬಸ್ರೂರು, ಇರ್ಫಾನ್ ನಾಗೂರು, ಅಶ್ರಫ್ ನಾಗೂರು, ಇಬ್ರಾಹಿಮ್ ಬೇದ್ರೆ, ಮುಹಮ್ಮದ್ ಅಸ್ಲಮ್ ತಲ್ಲೂರು ಮೊದಲಾದವರು ಉಪಸ್ಥಿತರಿದ್ದರು.
ಮೌಲಾನಾ ಝಮೀರ್ ಅಹ್ಮದ್ ರಶಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಅಬ್ದುಲ್ಲಾ ತಖೀ ಕುರ್‌ಆನ್ ಪಠಿಸಿದರು. ಅಸ್ಗರ್ ಅಲಿ ಬಸ್ರೂರು ಸ್ವಾಗತಿಸಿದರು. ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಭಾ ಬಾನು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು.