ಬೆಂಗಳೂರು:
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮತದಾರರಿಗೆ ಬಲಗೈಗೆ ಕೈಗವಸು ನೀಡಲಾಗುತ್ತದೆ. ಮತದಾರರು ಮತಗಟ್ಟೆ ಮುಂದೆ ಮಹಿಳೆಯರು, ಪುರಷರು, ವಿಕಲಚೇತನರಿಗಾಗಿ ಮೂರು ಮೂರು ಸಾಲಿನ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಿದ್ದತೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಆರ್‌ಆರ್ ನಗರ ವ್ಯಾಪ್ತಿಯ 9 ವಾರ್ಡ್‌ಗಳು ಪೈಕಿ, ಕಳೆದ 17 ದಿನದಲ್ಲಿ 1,177 ಕೋವಿಡ್ ಪಾಸಿಟಿವ್ ರೋಗಿಗಳನ್ನು ಗುರುತಿಸಲಾಗಿದ್ದು, ಮತದಾನ ಮಾಡಲು ಇಚ್ಚಿಸುವವರಿಗೆ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಮಾಡಲಿದ್ದಾರೆ ಎಂದರು.