Home Uncategorized ವಿಧಾನಸಭೆ ಕಲಾಪದಲ್ಲಿ ಮಾಧ್ಯಮ ನಿರ್ಬಂಧ ಮುಂದುವರಿಕೆ ಸಾಧ್ಯತೆ!

ವಿಧಾನಸಭೆ ಕಲಾಪದಲ್ಲಿ ಮಾಧ್ಯಮ ನಿರ್ಬಂಧ ಮುಂದುವರಿಕೆ ಸಾಧ್ಯತೆ!

52
0

ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಜಾರಿಯಾಗಿದ್ದ ವಿಧಾನಸಭೆ ಕಲಾಪದ ನಡಾವಳಿಗಳನ್ನು ಮಾಧ್ಯಮಗಳು ವಿಡಿಯೊ ಮತ್ತು ಛಾಯಾ ಚಿತ್ರ ತೆಗೆಯಲು ನಿರ್ಬಂಧ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಜಾರಿಯಾಗಿದ್ದ ವಿಧಾನಸಭೆ ಕಲಾಪದ ನಡಾವಳಿಗಳನ್ನು ಮಾಧ್ಯಮಗಳು ವಿಡಿಯೊ ಮತ್ತು ಛಾಯಾ ಚಿತ್ರ ತೆಗೆಯಲು ನಿರ್ಬಂಧ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಹಿಂದಿನಸರ್ಕಾರ ಜಾರಿಗೊಳಿಸಿದ್ದ ನಿರ್ಬಂಧವನ್ನು ಕಾಂಗ್ರೆಸ್‌ ಸರ್ಕಾರ ತೆಗೆಯಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ರಾಜ್ಯಪಾಲರ ಭಾಷಣ ಮತ್ತು ಬಜೆಟ್‌ ಅಧಿವೇಶನಕ್ಕೆ ತಯಾರಿ ಕುರಿತಂತೆ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಈ ಹಿಂದೆ ಯಾವ ನಿಯಮ ಪಾಲಿಸಲಾಗುತ್ತಿತ್ತೋ ಅದನ್ನೇ ಮುಂದುವರಿಸಿಕೊಂಡು ಹೋಗಬೇಕು, ಯಾವುದೇ ಬದಲಾವಣೆ ಬೇಡ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸಭೆಯಲ್ಲಿ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಹಿಂದಿನ ಸರ್ಕಾರದಲ್ಲಿ ಅಂದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯೊಳಗೆ ಕಲಾಪದ ನೇರ ಪ್ರಸಾರಕ್ಕೆ ಖಾಸಗಿ ಸುದ್ದಿವಾಹಿನಿಗಳು ಮತ್ತು ಪತ್ರಿಕೆಗಳ ಕ್ಯಾಮೆರಾಗಳಿಗೆ ನಿರ್ಬಂಧ ವಿಧಿಸಿದ್ದರು.

LEAVE A REPLY

Please enter your comment!
Please enter your name here