Home Uncategorized ವಿಧಾನಸೌಧದಲ್ಲಿ ನಮಾಜ್ ಗೆ ಅನುಮತಿ ನೀಡದ್ದಂತೆ ಶ್ರೀರಾಮಸೇನೆ ಎಚ್ಚರಿಕೆ

ವಿಧಾನಸೌಧದಲ್ಲಿ ನಮಾಜ್ ಗೆ ಅನುಮತಿ ನೀಡದ್ದಂತೆ ಶ್ರೀರಾಮಸೇನೆ ಎಚ್ಚರಿಕೆ

17
0

ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದರೆ  ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ಶುಕ್ರವಾರ ಹೇಳಿದೆ. ಧಾರವಾಡ: ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದರೆ  ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ಶುಕ್ರವಾರ ಹೇಳಿದೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್, ನಮಾಜ್‌ಗೆ ಅನುಮತಿ ನೀಡಿದರೆ ವಿಧಾನಸೌಧದ ಆವರಣದಲ್ಲಿ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದರು. 

ಕಾಂಗ್ರೆಸ್ ಸರ್ಕಾರ ಸಂಪೂರ್ಣ ಹಿಂದೂ ವಿರೋಧಿಯಾಗಿದೆ ಎಂದು ಪ್ರತಿಪಾದಿಸಿದ ಮುತಾಲಿಕ್, ಕಾಂಗ್ರೆಸ್ ಪಕ್ಷವು ದೇಶವನ್ನು ಹೇಗೆ ನಾಶ ಮಾಡಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಮಾಜ್ ಗೆ ಅನುಮತಿ ನೀಡಿದರೆ ಹನುಮಾನ್ ಚಾಲೀಸಾ ಪಠಿಸಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ, ಇಡೀ ಕರ್ನಾಟಕವೇ ಹೊತ್ತಿ ಉರಿಯಲಿದೆ ಎಂದು ಎಚ್ಚರಿಕೆ ನೀಡಿದರು. 

ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಶ್ರೀರಾಮಸೇನೆ ಬೆಂಬಲಿಸುತ್ತದೆ. ಇದರ ಜಾರಿಗಾಗಿ ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಹಿ ಅಭಿಯಾನವನ್ನು ಆಯೋಜಿಸಲಾಗುವುದು. ಧಾರ್ಮಿಕ ಮಠಾಧೀಶರು, ವಕೀಲರು, ವೈದ್ಯರು ಮತ್ತು ಇತರ ಪ್ರಮುಖ ವ್ಯಕ್ತಿಗಳಿಂದ ಅಭಿಯಾನ ಪ್ರಾರಂಭಿಸಲಾಗುವುದು. ಸಂವಿಧಾನದಲ್ಲಿ ಏಕರೂಪದ ಕಾನೂನನ್ನು ಉಲ್ಲೇಖಿಸಲಾಗಿದೆ ಆದರೆ. ಮುಸಲ್ಮಾನರ ಬಗ್ಗೆ ಕಾಂಗ್ರೆಸ್ ನ ತುಷ್ಟೀಕರಣ ನೀತಿಯೇ ಕಾರಣ  72 ವರ್ಷಗಳ ನಂತರವೂ ಅದನ್ನು ಜಾರಿಗೆ ತಂದಿಲ್ಲ ಎಂದರು. 

ಕಳೆದ 20 ವರ್ಷಗಳಿಂದ ಏಕರೂಪದ ಕಾನೂನುಗಳ ಅನುಷ್ಠಾನದ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾತನಾಡುತ್ತಿವೆ. ಬೇರೆ ಯಾವುದೇ ದೇಶಗಳಲ್ಲಿ ಎರಡು ಕಾನೂನುಗಳಿಲ್ಲ. ಭಾರತದಲ್ಲಿ ಮಾತ್ರ  ಇದು ಆಚರಣೆಯಲ್ಲಿದೆ ಎಂದು ಮುತಾಲಿಕ್ ಹೇಳಿದರು.

LEAVE A REPLY

Please enter your comment!
Please enter your name here