Home ಕರ್ನಾಟಕ ವಿಧಾನ ಸೌಧಕ್ಕೆ ಸ್ನೇಹಪರ ವಿದೇಶಿ ದೇಶಗಳ ಮಿಲಿಟರಿ ಅಧಿಕಾರಿಗಳು ಭೇಟಿ

ವಿಧಾನ ಸೌಧಕ್ಕೆ ಸ್ನೇಹಪರ ವಿದೇಶಿ ದೇಶಗಳ ಮಿಲಿಟರಿ ಅಧಿಕಾರಿಗಳು ಭೇಟಿ

34
0

ಬೆಂಗಳೂರು, ಮಾ. 18: ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ತರಬೇತಿ ಸಂಸ್ಥೆಯಾದ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಅಧಿಕಾರಿಗಳು, ನಾಗರಿಕ ಸೇವೆಗಳ ಅಧಿಕಾರಿಗಳು ಮತ್ತು ಸ್ನೇಹಪರ ವಿದೇಶಿ ದೇಶಗಳ ಮಿಲಿಟರಿ ಅಧಿಕಾರಿಗಳು ಅಧ್ಯಯನದ ಅಂಗವಾಗಿ ವಿಧಾನಸೌಧದಕ್ಕೆ ಭೇಟಿ ನೀಡಿದರು.

ದೇಶದ ವಿವಿಧ ರಾಜ್ಯಗಳ ಪ್ರವಾಸದ ಕೋರ್ಸ್ ಅನ್ನು ಪಠ್ಯಕ್ರಮದ ಭಾಗವಾಗಿ ಮಾಡಿಕೊಂಡಿರುವ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಅಧಿಕಾರಿಗಳು, ಭಾರತ ದೇಶದ ಪ್ರಗತಿಪರ ರಾಜ್ಯಗಳ ಅಧ್ಯಯನದ ಅಂಗವಾಗಿ ಸ್ನೇಹಪರ ವಿದೇಶಿ ದೇಶಗಳ ಮಿಲಿಟರಿ ಅಧಿಕಾರಿಗಳ ತಂಡದೊಂದಿಗೆ ವಿಧಾನಸೌಧಕ್ಕೆ ಭೇಟಿ ನೀಡಿದರು.

ವಿಧಾನಸೌಧ ಸಮಿತಿ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯದ ಪ್ರವಾಸಿ ತಾಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಮಿಲಿಟರಿ ಅಧಿಕಾರಿಗಳ ತಂಡ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ, ಸಂವಾದ ನಡೆಸಿದರು.

ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಾಂಬಿಯಾ, ರಷ್ಯಾ ಹಾಗೂ ಶ್ರೀಲಂಕಾ ದೇಶದ ಮಿಲಿಟರಿ ಅಧಿಕಾರಿಗಳು ರಾಷ್ಟ್ರೀಯ ರಕ್ಷಣಾ ಕಾಲೇಜಿನ ಅಧ್ಯಯನದ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್, ಜಂಟಿ ನಿರ್ದೇಶಕ ಜನಾರ್ದನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here