Home Uncategorized ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ: ವ್ಯಕ್ತಿ ಬಂಧನ

ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ: ವ್ಯಕ್ತಿ ಬಂಧನ

35
0

ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳುಪಡಿಸಿದ್ದಾರೆ. ಬೆಂಗಳೂರು: ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊರ್ವ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳುಪಡಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಸ್ವಪ್ನಿಲ್ ಹೊಲೆ (36)  ವಿಮಾನ ಸಂಖ್ಯೆ 6E 6803 ರಲ್ಲಿ ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ.

ಇಂಟರ್‌ಗ್ಲೋಬ್‌ನ ಸಹಾಯಕ ವ್ಯವಸ್ಥಾಪಕ ಅನು ಪಿ ಟಾಮ್ ಅವರು ಏರ್‌ಲೈನ್ ಪರವಾಗಿ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ವ್ಯಕ್ತಿಯ ವಿರುದ್ಧ ಭಾನುವಾರ ಬೆಳಿಗ್ಗೆ ಎಫ್‌ಐಆರ್ ದಾಖಲಿಸಿದ್ದಾರೆ.

ವಿಮಾನದ 5ಇ ಸೀಟನಲ್ಲಿ ವ್ಯಕ್ತಿ ಕುಳಿತುಕೊಂಡಿದ್ದರು. ಅವರು ಬೆಂಗಳೂರಿನಿಂದ ಬ್ಯಾಂಕಾಕ್’ಗೆ ಪ್ರಯಾಣಿಸುತ್ತಿದ್ದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನಕ್ಕೆ ತಲುಪಲು ನಾಗ್ಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಏರಿದ್ದರು. ಸೆಪ್ಟೆಂಬರ್ 30 ರ ರಾತ್ರಿ 10:15 ಕ್ಕೆ ವಿಮಾನವು ಟೇಕ್ ಆಫ್ ಆಗಬೇಕಿತ್ತು. ಆ ಸಮಯದಲ್ಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದರು. ವಿಮಾನವು ರಾತ್ರಿ 11:55 ಕ್ಕೆ ಬೆಂಗಳೂರಿಗೆ ತಲುಪಿದ ನಂತರ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 336 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here