Home Uncategorized ವಿರಾಟ್‌ ಕೊಹ್ಲಿಯನ್ನು ದಿಗ್ಗಜ ಅನ್ನೋದು ಯಾಕಂತೀರಾ: ಇಲ್ಲಿದೆ ನೋಡಿ!

ವಿರಾಟ್‌ ಕೊಹ್ಲಿಯನ್ನು ದಿಗ್ಗಜ ಅನ್ನೋದು ಯಾಕಂತೀರಾ: ಇಲ್ಲಿದೆ ನೋಡಿ!

50
0

ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದಿದ್ದ 2023ರ ವಿಶ್ವಕಪ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಭಾರತ ತಂಡದ 6 ವಿಕೆಟ್ ಗೆಲುವಿಗೆ ನೆರವಾಗಿದ್ದ ವಿರಾಟ್ ಕೊಹ್ಲಿಯನ್ನು ವೀರೇಂದ್ರ ಸೆಹ್ವಾಗ್ ಗುಣಗಾಣ ಮಾಡಿದ್ದಾರೆ. ಕಿಂಗ್ ಕೊಹ್ಲಿ ದೊಡ್ಡ ದೊಡ್ಡ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿತ್ತಾರೆಂದು ಹೇಳಿದ್ದಾರೆ.

ಕ್ರಿಕ್‌ಬಜ್‌ ಜೊತೆ ಮಾತನಾಡಿದ 2011ರ ವಿಶ್ವಕಪ್ ವಿಜೇತ ಆಟಗಾರ ವೀರೇಂದ್ರ ಸೆಹ್ವಾಗ್‌, ವಿರಾಟ್‌ ಕೊಹ್ಲಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು. ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ, ನಾಲ್ಕನೇ ವಿಕೆಟ್‌ಗೆ 165 ರನ್ ಜೊತೆಯಾಟವಾಡಿದ್ದರು. ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಗರಿಷ್ಠ ಜೊತೆಯಾಟ ಇದಾಗಿದೆ.

ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಿಜಕ್ಕೂ ಬಲು ಸುಂದರವಾದ ಇನಿಂಗ್ಸ್ ಕಟ್ಟಿದ್ದಾರೆ. ಅವರ ಜೊತೆಯಾಟವು ಅದ್ಭುತವಾಗಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧವೂ ಈ ಆಟಗಾರರು ಶತಕದ ಜೊತೆಯಾಟವಾಡಿದ್ದರು. ಆದರೆ, ಈ ಬಾರಿ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿ ಬಂದಿರುವ ಜೊತೆಯಾಟ ಇದಾಗಿದೆ,” ಎಂದು ವೀರೇಂದ್ರ ಸೆಹ್ವಾಗ್‌ ಶ್ಲಾಘಿಸಿದ್ದಾರೆ.

The post ವಿರಾಟ್‌ ಕೊಹ್ಲಿಯನ್ನು ದಿಗ್ಗಜ ಅನ್ನೋದು ಯಾಕಂತೀರಾ: ಇಲ್ಲಿದೆ ನೋಡಿ! appeared first on Ain Live News.

LEAVE A REPLY

Please enter your comment!
Please enter your name here